ಕರ್ನಾಟಕ

“ಹುಚ್ಚ ವೆಂಕಟ್‌’ ಎಂದ ವಿದ್ಯಾರ್ಥಿಗೆ ಶಿಕ್ಷಕಿ ಥಳಿತ

Pinterest LinkedIn Tumblr

hucchaಮಂಡ್ಯ: “ಹುಚ್ಚ ವೆಂಕಟ್‌’ ಎಂದು ಹೀಯಾಳಿಸಿದ ಎನ್ನಲಾದ ವಿದ್ಯಾರ್ಥಿಯೋರ್ವನಿಗೆ ಶಾಲೆಯ ಮುಖ್ಯ ಶಿಕ್ಷಕಿ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಇಲ್ಲಿನ ಗಾಂಧಿನಗರದ
ಜಾnನಗಂಗೋತ್ರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.

4 ದಿನ ನಂತರ ಘಟನೆ ಬೆಳಕಿಗೆ ಬಂದಿದೆ. ಪೃಥ್ವಿಕ್‌ (13) ಥಳಿತಕ್ಕೆ ಒಳಪಟ್ಟವ. ಈತ ತನ್ನ ಸ್ನೇಹಿತರ ಜತೆಗೂಡಿ ಮುಖ್ಯ ಶಿಕ್ಷಕಿ ಗುಣಮಣಿ ಅವರ ಪುತ್ರ ಹಾಗೂ ಅದೇ ಶಾಲಾ ಆಡಳಿತ ಮಂಡಳಿ ನಿರ್ದೇಶಕ ದರ್ಶನ್‌ ಅವರನ್ನು “ಹುಚ್ಚ ವೆಂಕಟ್‌’ ಎಂದು ವ್ಯಂಗ್ಯವಾಗಿ ಮಾತನಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇದನ್ನು ಗಮನಸಿದ ಗುಣಮಣಿ, ಪೃಥ್ವಿಕ್‌ನನ್ನು ಕೊಠಡಿಯೊಂದಕ್ಕೆ ಕರೆದೊಯ್ದು ಥಳಿಸಿದ್ದಾರೆನ್ನಲಾಗಿದೆ. ಪೃಥ್ವಿಕ್‌ ಪೋಷಕರು ಪಶ್ಚಿಮ ಠಾಣೆಯಲ್ಲಿ ದೂರಿದ್ದಾರೆ.
-ಉದಯವಾಣಿ

Write A Comment