Messages

ಮನುಷ್ಯನ ಮನೋಸ್ಥಿತಿ ಬಗ್ಗೆ ಒಂದು ನೋಟ.

Pinterest LinkedIn Tumblr

Mans_brain_pic

ಮನುಷ್ಯನ ಶರೀರದಲ್ಲಿ ಸಪ್ತಧಾತುಗಳು ನಿರಂತರ ಉತ್ಪತ್ತಿಯಾಗುತ್ತಿರುತ್ತದೆ. ಸಪ್ತ ಧಾತುಗಳ ಸ್ರವಿಸುವಿಕೆಯ ಪ್ರಮಾಣಕ್ಕನುಗುಣವಾಗಿ ಕಾಮಾದಿ ಷಡ್ಗುಣಗಳಿರುತ್ತದೆ.

ಇದರಲ್ಲಿ ವತ್ಯಾಸವಾದಾಗ ಷಡ್ಗುಣಗಳೂ ವತ್ಯಾಸವಾಗುತ್ತದೆ. ಷಡ್ಗುಣ ಬೇಕಾದ ಪ್ರಮಾಣದಲ್ಲಿದ್ದರೆ ಅದನ್ನು ಷಡ್ಗುಣ ಸಂಪನ್ನತೆ ಎಂದು ಹೇಳುತ್ತೇವೆ.ಷಡ್ಗುಣ ಸಂಪನ್ನತೆ ಇರುವವರನ್ನೇ ನಾವು ದೇವರೆಂದು ಪೂಜಿಸುತ್ತೇವೆ. ರಾಮ,ಕೃಷ್ಣ ಮುಂತಾದ ಪುರಾಣ ಪುರುಷರು ದೇವರಾದದ್ದು ಇಂತಹ ಷಡ್ಗುಣ ಸಂಪನ್ನತೆಯಿಂದಲೆ. ಷಡ್ಗುಣ ಸಂಪನ್ನತೆಯ ಕೊರತೆಗಳಾದವರನ್ನು psychic ಎಂದು ಕರೆಯಬಹುದು.

ಆದರೆ ನಾವು ಅತಿಯಾದ ಕೊರತೆಗಳುಳ್ಳವರನ್ನು psychic ಎಂಬುದಾಗಿ ಕರೆಯುತ್ತೇವೆ. ಉದಾ: ಇದು ಅತಿಯಾಗಿ ಕಾಣುವ ವ್ಯಕ್ತಿಗಳು ನಮ್ಮೆದುರಿಗೆ ಅನೇಕ ಜನ ಇದ್ದಾರೆ. ಇತ್ತೀಚೆಗೆ ನಾವು ನೋಡಿದ ವೆಂಕಟ. ಯಾರಾದರೂ ತಮ್ಮ ಹೆಸರಿನೊಂದಿಗೆ ಹುಚ್ಚ ಎಂದಿಟ್ಟುಕೊಳ್ಳುತ್ತಾರೆಯೇ?

ಹಾಗೆ ಇಟ್ಟುಕೊಂಡವರು ಖಿನ್ನರೆ. ಹಾಗೆಯೇ ಕೋಟ್ಯಾತರ ಜನ ಹಾಡಿಕೊಂಡಾಡುವ ರಾಮ ಕೃಷ್ಣರನ್ನು ಅವಮಾನಕರ ಮಾತಿನಿಂದ ನಿಂದಿಸುವ ಬಗವಾನನನ್ನು ಮಾನಸಿಕ ಖಿನ್ನತೆಗೆ ಒಳಗಾದವನು ಎಂದರೆ ತಪ್ಪಾಗದು.

ಒಂದು ಮುಖ್ಯ ಮಂತ್ರಿಗಳಿರುವ ವೇದಿಕೆಯಲ್ಲಿ ಇಡೀ ಕನ್ನಡ ನಾಡೇ ಪೂಜಿಸುವ ಕೆಂಪೇ ಗೌಡರಿಗೆ ಅವಮಾನಿಸುವ ಗಿರೀಶ್ ಕಾರ್ನಾಡನೂ ಒಬ್ಬ ಖಿನ್ನತೆಗೆ ಒಳಗಾದವನು ಎನ್ನಬಹುದು. ಯು ಆರ್ ಅನಂತ ಮೂರ್ತಿಯವರಿಗೆ ಜ್ಞಾನಪೀಠ ದೊರೆತಾಗ ತಾನೇನು ಕಮ್ಮಿಯೇ ಎಂದು ಬೊಬ್ಬೆ ಹೊಡೆದವರು ಯಮ್ ಯಮ್ ಕಲಬುರ್ಗಿಯವರು.ಇದು ಕೂಡಾ ಒಂದು ಖಿನ್ನತೆಯ ಪ್ರಬೇಧ. ಹೀಗೇ ಅನೇಕ ಜನರಿದ್ದಾರೆ.

ಖಿನ್ನತೆಯ ರೂಪಗಳು ಬೇರೆ ಬೇರೆಯಾಗಿರುತ್ತದೆ. ಇದಕ್ಕೆ ಕಾರಣ ಉನ್ಮಾದಗಳು ಎಂದಿದ್ದಾರೆ.ಉನ್ಮಾದಗಳಲ್ಲಿ ಹತ್ತು ವಿಧಗಳಿವೆ. ಇಲ್ಲೂ ಅಪಸ್ಮಾರೋನ್ಮಾದ ಎಂಬ ರೂಪವೂ ಇದೆ.ಇದನ್ನು Pitts ಎನ್ನಲಾಗಿದೆ. ಹಿಂದಿನ ಕಾಲದಲ್ಲಿ ಪ್ರೇತದೋಷ, ಕುಲೆ ಹಿಡಿಯುವುದು,ರಾವು ದೋಷ ಎಂದು ಕರೆದು ಆಗಿನ ಕಾಲಕ್ಕೆ ತಕ್ಕಂತೆ ಔಷದೋಪಚಾರಗಳನ್ನು ಕೆಲವರು ಮಾಡಿಕೊಂಡರು. ಕೆಲವರು ಉಪಚಾರವಿಲ್ಲದೆ ಅಪಮೃತ್ಯುವಿಗೀಡಾದರು. ಬೆಂಕಿ,ನೀರು ಇತ್ಯಾದಿಗೆ ಬಿದ್ದು ಆಗ ಸತ್ತರೆ, ಈಗ ಅಸಂಭದ್ದ ಮಾತನಾಡಿ ಒದೆ ತಿಂದು ಸಾಯುತ್ತಾರೆ.

ಈ. ಮುಸ್ಲಿಂ ಭಯೋತ್ಪಾದಕರೂ ಇದೇ ವರ್ಗದವರು. ಇವರು ಅಲ್ಲಾಹು ಹೆಸರಿನಲ್ಲಿ ಕೇಕೆ ಹೊಡೆದು ನರಮೇಧ ಮಾಡುತ್ತಾರೆ.ಇದು ಕೂಡಾ ಅಪಸ್ಮಾರ ಕಾಯಿಲೆ. ಅಂತು ಷಡ್ಗುಣಗಳಲ್ಲಿ ಯಾವುದೇ ಗುಣವು ಅತಿಯಾಗಿದ್ದರೆ ಅದು ಉನ್ಮಾದವೇ ಆಗುತ್ತದೆ.

ಅತ್ಯಾಚಾರಿಗಳಲ್ಲೂ ಅತಿಯಾದ ಕಾಮೋದ್ರೇಕ ಗುಣ, ಭಯೋತ್ಪಾದಕರಲ್ಲಿ ಅತಿಯಾದ ಮತಾಂಧತೆ, ಇನ್ನು ವಿಪರೀತ ಸಿಟ್ಟಿಗೆದ್ದು ಹೊಡೆದಾಟಕ್ಕಿಳಿಯುವಿಕೆ ಮದೋನ್ಮಾದ.

ಇದಕ್ಕೆ ಕಾರಣ ಜಾತಕದಲ್ಲಿ ಚಂದ್ರ ಸ್ಥಿತಿ. ಕ್ಷೀಣ ಸ್ಥಿತಿಯ ಚಂದ್ರನಿದ್ದು ಅದಕ್ಕೆ ಪೂರಕವಾದ ಇತರ ಗ್ರಹ ಸ್ಥಿತಿಯೂ ಇದ್ದರೆ ಅಂತವರು ಖಿನ್ನರಾಗಿ ಸಮಾಜದಲ್ಲಿ ಪಾಪಕಾರ್ಯ ಮಾಡುತ್ತಾ ,ಕೊನೆಗೆ ಅಪಮೃತ್ಯುವಿಗೀಡಾಗುತ್ತಾರೆ.

ಚಂದ್ರನ ಹಿಂದು ಮುಂದು ಗ್ರಹ ಇಲ್ಲದೆ, ಬುದ್ಧಿಸ್ಥಾನವೂ ನಿರ್ಬಲವಾದರೆ ಕೇಮದ್ರುಮಾ( ದರಿದ್ರ) ಚಿಂತನೆಗಳು ಹೆಚ್ಚಾಗುತ್ತಾ ಆತ್ಮಹತ್ಯೆ ಕೂಡಾ ಮಾಡಿಕೊಳ್ಳುತ್ತಾರೆ. ಇಂತಹ ಜನರನ್ನು ನಾವು ದ್ವೇಷಿಸಬಾರದು.ಅವನ ದಾರಿಯಲ್ಲೇ ಹೋಗಿ ಮೆತ್ತಗೆ ಅವನ ಮನಸ್ಸನ್ನು ತಿದ್ದಬೇಕು. ಮಾಧ್ಯಮದವರಂತೆ ಅವರನ್ನು ಕೆರಳಿಸಿ ಬಿಟ್ಟರೆ ಅವರ ಸುಧಾರಣೆ ಸಾವಿನಲ್ಲೇ ಆಗುತ್ತದೆ. ಮಾನವ ಜನ್ಮವೇ ದೊಡ್ಡದು.

ಕಾನೂನಿನಲ್ಲಿ ಒಂದು ಮಾತಿದೆ.we cannot break the law.we can bend it.ಹಾಗೆಯೇ ಖಿನ್ನತೆ ಉಳ್ಳ ವ್ಯಕ್ತಿಗಳನ್ನು ನೇರವಾಗಿ ತಡಯದೆ, ಅವರ ದಾರಿಯಲ್ಲೇ ನಡೆದು ಸಾವಧಾನದಿಂದ ಸರಿಪಡಿಸುವುದು ಉತ್ತಮ ಮಾರ್ಗ.

Write A Comment