ರಾಷ್ಟ್ರೀಯ

ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ -ಜಪಾನ್ ಪ್ರಧಾನಿ ಶಿಂಜೋ ಅಬೆ ಸಹಿ

Pinterest LinkedIn Tumblr

modi-abe

ನವದೆಹಲಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಸಹಿ ಹಾಕಿದ್ದಾರೆ.

ದೆಹಲಿಯ ಹೈದ್ರಾಬಾದ್ ಹೌಸ್‍ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಬುಲೆಟ್ ಟ್ರೈನ್ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು. ಅಹಮದಾಬಾದ್-ಮುಂಬೈ ಮಧ್ಯೆ ಬುಲೆಟ್ ರೈಲು ಯೋಜನೆ, ಪರಮಾಣು, ರಕ್ಷಣಾ ಕ್ಷೇತ್ರ, ತಂತ್ರಜ್ಞಾನ ಮತ್ತು ಆರ್ಥಿಕ ಕ್ಷೇತ್ರಗಳ ನೆರವಿನ ಕುರಿತಂತೆ ಒಪ್ಪಂದ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಜಪಾನ್ ಪ್ರಧಾನಿ ಅಬೆ, ಜಪಾನ್‍ನ ಹೂಡಿಕೆಯಿಂದ ಭಾರತದಲ್ಲಿ ಅಭಿವೃದ್ಧಿ ಹೆಚ್ಚಾಗಲಿದೆ. ಜಪಾನ್ ಬಲಿಷ್ಠವಾದರೆ ಭಾರತಕ್ಕೆ ಒಳ್ಳೆಯದು ಎಂದು ಹೇಳಿದರು. ಮೋದಿಯವರ ಆರ್ಥಿಕ ನೀತಿಯನ್ನು ಹೊಗಳಿದ ಅಬೆ, ಹೈ ಸ್ಪೀಡ್ ರೈಲಿನಂತೆ ಸುರಕ್ಷಿತವಾಗಿದೆ ಎಂದರು.

ಮುಂಬೈ – ಅಹಮದಾಬಾದ್ ನಡುವೆ ಬುಲೆಟ್ ರೈಲು ಸಂಚರಿಸಲಿದ್ದು, ಈ ಯೋಜನೆಗೆ 98 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಶೇ.81ರಷ್ಟು ಹಣವನ್ನು ಜಪಾನ್ ಹೂಡಿಕೆ ಮಾಡಿದರೆ, ಶೇ. 19ರಷ್ಟು ಹಣವನ್ನು ಭಾರತ ಹೂಡಲಿದೆ. 52,800 ಕೋಟಿ ರೂಗಳನ್ನು ಜಪಾನ್‌ ಸರ್ಕಾರ ಸಾಲದ ರೂಪದಲ್ಲಿ ಒದಗಿಸಲಿದೆ. ಶೇ.0.5ರಷ್ಟು ಬಡ್ಡಿ ದರದಲ್ಲಿ ನೀಡುವ ಈಸಾಲ ಮರುಪಾವತಿಗೆ 50 ವರ್ಷ ಕಾಲಾವಧಿ ಇರುತ್ತದೆ.

ಯೋಜನೆ ಕಾಮಗಾರಿ 2017ರಲ್ಲಿ ಆರಂಭವಾಗಲಿದ್ದು, 2023ರಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈ ಬುಲೆಟ್‌ ರೈಲು ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಈ ಎರಡು ನಗರಗಳ 503 ಕಿ.ಮೀ ದೂರವಿದ್ದು, ಪ್ರಸ್ತುತ ಎಕ್ಸ್ ಪ್ರೆಸ್ ರೈಲುಗಳು 8 ಗಂಟೆ ಕ್ರಮಿಸಿ ಈ ದೂರವನ್ನು ತಲುಪುತ್ತವೆ. ಬುಲೆಟ್ ರೈಲು ಆರಂಭವಾದರೆ 3 ಗಂಟೆ ಅವಧಿಯಲ್ಲಿ ನಗರಗಳನ್ನು ಕ್ರಮಿಸಬಹುದು.

Write A Comment