
ದುಬೈ : ಯು ಎ ಇ ರಾಷ್ಟ್ರೀಯ ದಿನಾಚರನೆಯೊಂದಿಗೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಅಧೀನದಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮವು ಡಿಸೆಂಬರ್11 ರಂದು ದುಬೈ ಇರಾನಿಯನ್ ಕ್ಲಬ್ ಹತ್ತಿರವಿರುವ ಜೇಮ್ಸ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದ್ದು , ಆ ಪ್ರಯುಕ್ತ ತಾಯಿನಾಡಿನ ಗಣ್ಯ ಅತಿಥಿಗಳಾದ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಗೌರವ ಸಲಹೆಗಾರರಾದ ಸಯ್ಯದ್ ಅಲಿ ತಂಙಲ್ ಕುಂಬೋಲ್ , ಅಕಾಡೆಮಿ ಅಧ್ಯಕ್ಷರಾದ ಕೆ ಪಿ ಆಕರ್ಷಣ್ ಅಹಮ್ಮದ್ ಹಾಜಿ ಹಾಗೂ ಕ್ರಿಸ್ಟಲ್ ಜುಬಿಲಿ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಗೈಯಲ್ಲಿರುವ ಹಾಜಿ ಹುಸೈನ್ ದಾರಿಮಿ ರೆಂಜಲಾಡಿ ಯವರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆ ಐ ಸಿ ಪಧಾಧಿಕಾಗಳು ಹೂ ಗುಚ್ಚ ನೀಡಿ ಸ್ವಾಗತಿಸಿದರು.




ಈ ಸಂಧರ್ಭದಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಶರೀಫ್ ಕಾವು , ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ , ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ , ಕ್ರಿಸ್ಟಲ್ ಜುಬಿಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ , ಸುಲೈಮಾನ್ ಮೌಲವಿ ಕಲ್ಲೇಗ , ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ ಸ್ವಾಗತ ಸಮಿತಿ ಕೋಶಾಧಿಕಾರಿ ಅಶ್ರಫ್ ಖಾನ್ ಮಾಂತೂರ್ , ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಮಣಿಲ, ಶಾರ್ಜಾ ಸಮಿತಿ ಅಧ್ಯಕ್ಷರಾದ ರಝಾಕ್ ಹಾಜಿ ಮನಿಲ ದುಬೈ ಸಮಿತಿ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಗೂನಡ್ಕ , ಸ್ವಾಗತ ಸಮಿತಿ ಪಧಾಧಿಕಾರಿಗಳಾದ ಅಸೀಫ್ ಕಂಬಳಬೆಟ್ಟುಬರ ದುಬೈ ಸಮಿತಿ ನೇತಾರರಾದ ಅಶ್ರಫ್ ಅರ್ತಿಕೆರೆ , ಅಝೀಝ್ ಸೊರಕೆ ಮೊದಲಾದವರು ಉಪಸ್ತಿತರಿದ್ದು ಪ್ರೀತಿ ಪೂರ್ವಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಡಿಸೆಂಬರ್ 11 ರಂದು ಸಂಜೆ 4.30 ರಿಂದ ಪ್ರಾರಂಭ ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಅತ್ತಿಪಟ್ಟ ಉಸ್ತಾದ್ ಎಂದೇ ಚಿರಪರಿಚಿತರು , ಸೂಫೀವರ್ಯರು ಪ್ರಮುಖ ಪಂಡಿತ ಶ್ರೇಷ್ಟರು ಆದ ಅತ್ತಿಪಟ್ಟ ಮೊಹಿಯುದ್ದೀನ್ ಕುಟ್ಟಿ ಮುಸ್ಲಿಯಾರ್ ರವರು ನೇತೃತ್ವ ನೀಡಲಿದ್ದು , ಯು ಎ ಇ ಸೌದಿ ಅರೇಬಿಯಾ ಖತಾರ್ ಕುವೈಟ್ ಮೊದಲಾದ ಅರಬ್ ರಾಷ್ಟ್ರಗಳ ಉದ್ಯಮಿಗಳು , ಸಾಮಾಜಿಕ ದಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದ ನೇತಾರರು , ಕೆ ಐ ಸಿ ಹಿತೈಷಿಗಳು ಉಪಸ್ತಿತರಿರಲಿದ್ದಾರೆ . ಸುಮಾರು ಒಂದು ಸಾವಿಕ್ಕಿಂತಲೂ ಅಧಿಕ ಕೆ ಐ ಸಿ ಹಿತೈಷಿ ವರ್ಗ ಪಾಲ್ಗೊಳ್ಳುವ ನಿರೀಕ್ಷೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದ್ದರಿಂದ ಅನಿವಾಸಿ ಕೆ ಐ ಸಿ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸ್ವಾಗತ ಸಮಿತಿ ಅಧ್ಯಕ್ಷರಾದ ಶರೀಫ್ ಕಾವು ಹಾಗೂ ಕೆ ಐ ಸಿ ಕೇಂದ್ರ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ವಿನಂತಿಸಿಕೊಂಡಿರುತ್ತಾರೆ .