ದುಬೈ: 1997ರಲ್ಲಿ ಸ್ಥಾಪನೆಗೊಂಡು ಕಳೆದ 18 ವರ್ಷಗಳಿಂದ ಯುಎಇ ಹಾಗೂ ತಾಯಿನಾಡಿನ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ಸೇವೆ ಮಾಡುತ್ತಾ ಈ ವರ್ಷ ಯುಎಇಯ ಇತಿಹಾಸದಲ್ಲೆ ಮೊತ್ತಮೊದಲಿಗೆ ಯಶಸ್ವಿಯಾದ ರೀತಿಯಲ್ಲಿ ಗಣೇಶ ಉತ್ಸವ ಮಾಡುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 2016ನೆ ಸಾಲಿನ ಅಧ್ಯಕ್ಷರಾಗಿ ಪ್ರಭಾಕರ ಅಂಬಲತೆರೆ ಅವಿರೋಧ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 2ರಂದು ಶಾರ್ಜಾ ಅರಬ್ ಉಡುಪಿ ಹೊಟೇಲ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 19 ಮಂದಿಯ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಿ ಆ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದರು.
ಈ ನಾಡಿನ ಕಾನೂನಿಗೆ ಒಳಪಟ್ಟು ಇಲ್ಲಿರುವ ಕನ್ನಡಿಗರಿಗಾಗಿ ಎಲ್ಲ ರೀತಿಯ ಸಹಾಯ-ಸಹಕಾರವನ್ನು ನೀಡುವುದಾಗಿ ಹೊಸದಾಗಿ ಆಯ್ಕೆಯಾದ ಪ್ರಭಾಕರ ಅಂಬಲತೆರೆ ಹೇಳಿದರು. ಕಾರ್ಯಕ್ರಮವನ್ನು ಕುಮಾರಿ ಸ್ಮಿತಾ ರಾವ್ ನಡೆಸಿಕೊಟ್ಟರು. ಪ್ರಭಾಕರ ಅಂಬಲತೆರೆ ಈ ಸಂಘದ ಸ್ಥಾಪಕರೂ ಹಾಗೂ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪದಾಧಿಕಾರಿಗಳು
ಅಧ್ಯಕ್ಷರು-ಪ್ರಭಾಕರ ಅಂಬಲತೆರೆ
ಉಪಾಧ್ಯಕ್ಷ -ರಾಜೇಶ್ ರಾವ್ ಪುಣೆ
ಪ್ರಧಾನ ಕಾರ್ಯದರ್ಶಿ-ಸುಗಂದ್‌ರಾಜ್ ಬೇಕಲ್
ಜೊತೆ ಕಾರ್ಯದರ್ಶಿ-ಯಶ್ವಂತ್
ಕೋಶಾಧಿಕಾರಿ-ಬಸಂತ್ ಬೇಕಲ್
ಜೊತೆ ಕೋಶಾಧಿಕಾರಿ-ಮಹೇಶ್ ಹವಲ್ದಾರ್
ಕ್ರೀಡಾ ಕಾರ್ಯದರ್ಶಿ-ಸುಬ್ರಮಣ್ಯ
ಕೋಆರ್‌ಡಿನೇಟರ್-ಸಂದೀಪ್ ರಾವ್, ಅಜಿತ್ ಬೇಕಲ್, ಪ್ರವೀಣ್ ಉಪ್ಪೂರ್
















