ಲಕ್ನೋ: ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗುವ ಉತ್ತರ ಪ್ರದೇಶ ಸಚಿವ ಅಜಂಖಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಗತ್ಪ್ರಸಿದ್ದ ಸ್ಮಾರಕ ತಾಜ್ ಮಹಲ್ ಅನ್ನು ಧ್ವಂಸ ಮಾಡಿ, ಆ ಜಾಗದಲ್ಲಿ ಶಿವ ದೇವಾಲಯ ನಿರ್ಮಿಸುವಂತೆ ಶಿವಸೇನೆಗೆ ಸವಾಲು ಹಾಕಿದ್ದಾರೆ.
ಆರ್ ಎಸ್ ಎಸ್ ನಂತರ ಶಿವಸೇನೆ ವಿರುದ್ಧ ಹರಿ ಹಾಯ್ದಿರುವ ಅಜಂಖಾನ್ , ಶಿವಸೇನೆ ತಾಜ್ ಮಹಲ್ ಅನ್ನು ಧ್ವಂಸ ಮಾಡಿ, ಅದರ ಮೇಲೆ ಶಿವನ ದೇವಾಲಯ ನಿರ್ಮಿಸಲಿ. ಮಣ್ಣು ತೆಗೆದು ಹಾಕಲು ತಾವು ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸದ 23 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅಜಂ ಖಾನ್ ಈ ವಿವಾದಾತ್ಮಕ ಹೇಳಿಕೆ ನೀಡಿರುವುದು ಹಲವರು ಕೆಂಗಣ್ಣಿಗೆ ಗುರಿಯಾಗಿದೆ.
