ಮನೋರಂಜನೆ

ದೀಪಿಕಾ-ರಣವೀರ್ ‘ತೆರೆಯ ಮೇಲೆ ಅತಿ ಹೆಚ್ಚು ಗ್ಲ್ಯಾಮರಸ್’ ಜೋಡಿ

Pinterest LinkedIn Tumblr

ranveer-deepika-PTI1

ನವದೆಹಲಿ: ನಿಜ ಜೀವನದ ತಮ್ಮ ನಡುವಿನ ಅತ್ಯುತ್ತಮ ಬಾಂಧವ್ಯವನ್ನು ತೆರೆಯ ಮೇಲೆ ಕೊಂಡೊಯ್ದಿರುವುದಕ್ಕೆ ಸಾಕ್ಷಿಯಾಗಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಕಪೂರ್ ಜೋಡಿಯನ್ನು ತೆರೆಯ ಮೇಲಿನ ಅತಿ ಹೆಚ್ಚು ಗ್ಯಾಮರಸ್ ಜೋಡಿ ೨೦೧೫ ಫಿಲ್ಮ್ ಫೇರ್ ಗ್ಲ್ಯಾಮರ್ ಮತ್ತು ಸ್ಟೈಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಪ್ಪು ಕುರ್ತಾ-ಸಲ್ವಾರ್ ಮತ್ತು ಕಪ್ಪು ಕೋಟು ಹೊದ್ದಿದ್ದ ರಣವೀರ್ ತಮ್ಮ ಪ್ರೇಮ ಸಂಗಾತಿ ದೀಪಿಕಾ ಜೊತೆಗೆ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಈ ಜೋಡಿ ಸಂಜಯ್ ಲೀಲಾ ಬನ್ಸಾಲಿ ಅವರ ‘ರಾಮ್-ಲೀಲಾ’ದಲ್ಲಿ ನಟಿಸಿ ಮೋಡಿ ಮಾಡಿತ್ತು ಮತ್ತು ಬಿಡುಗಡೆಯಾಗಲಿರುವ ಬನ್ಸಾಲಿ ನಿರ್ದೇಶನದ ‘ಬಾಜಿರಾವ್ ಮಸ್ತಾನಿ’ಯಲ್ಲೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ನವೆಂಬರ್ ೩೦ ರಂದು ಫಿಲ್ಮ್ ಫೇರ್ ಗ್ಲ್ಯಾಮರ್ ಮತ್ತು ಸ್ಟೈಲ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿತ್ತು.

Write A Comment