ಕನ್ನಡ ವಾರ್ತೆಗಳು

ಕ್ರಿಯಾತ್ಮಕ ತುಳುನಾಡ ಛಾಯಾಚಿತ್ರ ಸ್ಪರ್ಧೆ .

Pinterest LinkedIn Tumblr

photography_pic_

ಮಂಗಳೂರು,ಡಿ.03 : ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸುವ ತುಳುನಾಡ ಛಾಯಾಚಿತ್ರ ಸ್ಪರ್ಧೆ ಡಿಸೆಂಬರ್‍ನಲ್ಲಿ ನಡೆಯಲಿದ್ದು ಸ್ಪರ್ಧೆಯಲ್ಲಿ ವಿಜೇತ ಮತ್ತು ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನ ತುಳುಕೂಟ ಕಚೇರಿ ಉದ್ಘಾಟನಾ ಸಮಾರಂಭದ ವೇಳೆ ನಡೆಯಲಿದೆ.

ವಿಶ್ವತುಳುವೆರೆ ಪರ್ಬ 2014 ಸಂದರ್ಭದಲ್ಲಿ ತೆಗೆದ ಕ್ರಿಯಾತ್ಮಕ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬೇಕು. ವಿಜೇತರಿಗೆ ಪ್ರಥಮ ಬಹುಮಾನ ಐದು ಸಾವಿರ ರೂ. ಮತ್ತು ಪ್ರಶಸ್ತಿ ಪತ್ರ ದ್ವಿತೀಯ ಬಹುಮಾನ ಮೂರು ಸಾವಿರ ರೂ. ಮತ್ತು ಪ್ರಶಸ್ತಿ ಪತ್ರ ಹಾಗೂ ತೃತೀಯ ಬಹುಮಾನ ಎರಡು ಸಾವಿರ ರೂ. ಹಾಗೂ ಪ್ರಶಸ್ತಿ ಪತ್ರ ಮತ್ತು 4ಸಮಾಧಾನಕರ ಬಹುಮಾನ ನೀಡಲಾಗುವುದು.

ಸ್ಪರ್ಧೆಯಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ಛಾಯಾ ಚಿತ್ರಗಾರರು ಭಾಗವಹಿಸಬಹುದು. ಛಾಯಾಚಿತ್ರ ಸ್ಪರ್ಧೆ ಫಲಿತಾಂಶವನ್ನು ವಾರ್ತಾ ಪತ್ರಿಕೆ ಮತ್ತು ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ಸ್ಪರ್ಧೆಗೆ ಛಾಯಾಚಿತ್ರಗಳನ್ನು ಡಿಸೆಂಬರ್ 5ರ ಒಳಗೆ ಕೇದಿಗೆ ವಸಂತ ರಾವ್ ಅವರಿಗೆ ಕಳುಹಿಸಿ ಕೊಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment