ರಾಷ್ಟ್ರೀಯ

ಬಟ್ಟೆ ತೊಳೆದುಕೊಳ್ಳಲು ಮಾತ್ರ ಮೋದಿ ಭಾರತಕ್ಕೆ: ತೇಜಸ್ವಿ ಯಾದವ್

Pinterest LinkedIn Tumblr

biಪಾಟ್ನಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸತತ ವಿದೇಶ ಯಾತ್ರೆಯನ್ನು ಟೀಕಿಸಿದ ಬಿಹಾರ್ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಬಟ್ಟೆ ಒಗೆದುಕೊಳ್ಳಲು ಮಾತ್ರ ಭಾರತಕ್ಕೆ ಆಗಮಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ದೇಶಕ್ಕೆ ಯಾವುದೇ ರೀತಿಯ ಲಾಭವಾಗುತ್ತಿಲ್ಲ. ಆದಾಗ್ಯೂ, ವಿದೇಶ ಪ್ರವಾಸದ ಹಂಬಲ ಅವರನ್ನು ಬಿಡುತ್ತಿಲ್ಲ. ಕೇವಲ ಬಟ್ಟೆಗಳನ್ನು ಮಾತ್ರ ತೊಳೆದುಕೊಂಡು ಮತ್ತೆ ವಿದೇಶಕ್ಕೆ ಹಾರುತ್ತಾರೆ ಎಂದು ಗುಡುಗಿದ್ದಾರೆ.

ದೇಶದ ಅಭಿವೃದ್ಧಿಯ ಬಗ್ಗೆ ರೈತರ ಬಗ್ಗೆ ಮೋದಿಯವರಿಗೆ ಯಾವುದೇ ಕಾಳಜಿಯಿಲ್ಲ. ದೇಶದ ಬಗ್ಗೆ ಯೋಚಿಸಲು ಅವರ ಬಳಿ ಸಮಯವೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಿಹಾರ್ ರಾಜ್ಯದಲ್ಲಿ ನೂತನವಾಗಿ ಆಯ್ಕೆಯಾದ ಸರಕಾರ ಜನತೆಯ ಆಶೋತ್ತರಗಳಿಗೆ ತಕ್ಕಂತೆ ನಡೆಯುತ್ತದೆ ಎಂದು  ಮಾಜಿ ಕ್ರಿಕೆಟಿಗ, ಬಿಹಾರ್ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.

Write A Comment