ರಾಷ್ಟ್ರೀಯ

ಬಾಲಕನ ಅಪಹರಣ: ಶಾಲೆಯಲ್ಲಿ ಪೊಲೀಸರು, ಅಪಹರಣಕಾರರ ಮಧ್ಯೆ ಶೂಟೌಟ್

Pinterest LinkedIn Tumblr

apaಗಾಜಿಯಾಬಾದ್: ಶಾಲಾ ಆವರಣದಲ್ಲಿ ಬಾಲಕನನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಹರಣಕಾರರು ಮತ್ತು ಪೊಲೀಸರ ನಡುವೆ ಸುಮಾರು 20 ನಿಮಿಷಗಳ ಕಾಲ ಶೂಟೌಟ್ ನಡೆದು ಮೂವರು ಅಪಹರಣಕಾರರಲ್ಲಿ ಒಬ್ಬನು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

ಶೇರ್ ಬ್ರೋಕರ್ ಪುತ್ರನಾದ 13 ವರ್ಷ ವಯಸ್ಸಿನ ಕರಣ್ ಮಹಾಜನ್‌‌ನನ್ನು ಅಪಹರಿಸಿದ ಅಪಹರಣಕಾರರು ಪುತ್ರನ ಬಿಡುಗಡೆಗೆ ಎರಡು ಕೋಟಿ ರೂಪಾಯಿಗಳನ್ನು ನೀಡುವಂತೆ ಒತ್ತಾಯಿಸಿದ್ದರು.

ರಾಜ್ ನಗರ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಕರಣ್ ಮಹಾಜನ್‌ನನ್ನು ಅಪಹರಿಸಿ ಹಣಕ್ಕಾಗಿ ಆರೋಪಿಗಳು ಕರಣ್ ತಂದೆಗೆ ಮೊಬೈಲ್ ಕರೆ ಮಾಡಿ ಎರಡು ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು.

ಮೊಬೈಲ್ ಕರೆಯನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳು ಶಾಲೆಯಲ್ಲಿರುವುದು ತಿಳಿದು ಬಂದಿದೆ. ಶಾಲೆಯೊಳಗೆ ನುಗ್ಗಿದ ಪೊಲೀಸರ ಮೇಲೆ ಆರೋಪಿಗಳು ಗುಂಡು ಹಾರಿಸಿದ್ದಾರೆ. ಸುಮಾರು 20 ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಅಪಹರಣಕಾರ ಗಾಯಗೊಂಡಿದ್ದಾನೆ.

ಆರೋಪಿಗಳಾದ ದೀಪಕ್, ಬಿಟ್ಟೂ ಮತ್ತು ಸಂದೀಪ್ ಎನ್ನುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕಳೆದ ನವೆಂಬರ್ 29 ರಂದು ಕರಣ್ ಮಹಾಜನ್‌ನನ್ನು ಆಟದಾ ಮೈದಾನದಿಂದ ಮೂವರು ಅಪಹರಿಸಿದ್ದರು. ಅದ್ದಕೂ ಮುನ್ನ ಆರೋಪಿಗಳು ಕರಣ್‌ನೊಂದಿಗೆ ಸ್ನೇಹ ಬೆಳೆಸಿ ಹಲವಾರು ಬಾರಿ ಕ್ರಿಕೆಟ್ ಆಟವಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ, ಕಳೆದ ರಾತ್ರಿ ಅಪಹರಣಕಾರರು ಕರಣ್ ಮೊಬೈಲ್‌ನಿಂದ ಆತನ ತಾಯಿಗೆ ಕರೆ ಮಾಡಿ ಪುತ್ರ ಬಿಡುಗಡೆಯಾಗಬೇಕಾದಲ್ಲಿ ಎರಡು ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು. ಮೊಬೈಲ್ ಕರೆಯ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Write A Comment