ರಾಷ್ಟ್ರೀಯ

ಬಿಜೆಪಿ ಕಚೇರಿಯ ಕಸಗುಡಿಸುವವನ ಪುತ್ರಿಯ ವಿವಾಹಕ್ಕೆ ಹಾಜರಾದ ಸಿಎಂ ರಘುಬೀರ್ ದಾಸ್

Pinterest LinkedIn Tumblr

kasaಪಲಾಮು(ಜಾರ್ಖಂಡ್),: ಬಿಜೆಪಿ ಕಚೇರಿಯಲ್ಲಿ ಕಸಗುಡಿಸುವ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬನ ಪುತ್ರಿಯ ವಿವಾಹಕ್ಕೆ ಮುಖ್ಯಮಂತ್ರಿ ರಘುಬರ್ ದಾಸ್ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.

ಕಸಗುಡಿಸುವ ಫೌಲೊ ಖಾಲ್ಖೋ, ತನ್ನ ಪುತ್ರಿಯ ವಿವಾಹಕ್ಕೆ ಮುಖ್ಯಮಂತ್ರಿ ರಘುಬರ್ ದಾಸ್ ಆಗಮಿಸಿರುವುದು ಸಂತಸ ತಂದಿದೆ ಎಂದು ಹೇಳಿದ್ದಾನೆ. ಮುಖ್ಯಮಂತ್ರಿ ರಘುಬರ್ ದಾಸ್ ನವದಂಪತಿಗಳಿಗೆ ಆಶೀರ್ವದಿಸಿ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುವಂತೆ ಹಾರೈಸಿದ್ದಾರೆ.

ಆಸಕ್ತಿಕರ ವಿಷಯವೆಂದರೆ ಖಾಲ್ಖೋ ಪುತ್ರಿ ಪ್ರೀತಿ, ತನ್ನ ಅತ್ತೆಯ ಮಗ, ಬಿಜೆಪಿ ಕಾರ್ಯಕರ್ತ ಸುಮನ್ ಕುಜುರ್ ಎಂಬಾತನನ್ನು ವಿವಾಹವಾಗಿದ್ದಾಳೆ.

ಮುಖ್ಯಮಂತ್ರಿ ರಘುಬರ್ ದಾಸ್ ಸಮ್ಮುಖದಲ್ಲಿ ಮಾತನಾಡಿದ ಪ್ರೀತಿ, ನನ್ನ ಮದುವೆಗೆ ಮುಖ್ಯಮಂತ್ರಿಗಳು ಆಗಮಿಸಿ ವಿಶೇಷತೆ ತಂದಿದ್ದಾರೆ. ಮುಖ್ಯಮಂತ್ರಿಗಳ ಆಶೀರ್ವಾದದಿಂದ ಹೊಸ ವೈವಾಹಿಕ ಜೀವನ ಆರಂಭವಾಗಿರುವುದಕ್ಕೆ ಸಂತಸ ತಂದಿದೆ ಎಂದಿದ್ದಾಳೆ.

ಮುಖ್ಯಮಂತ್ರಿ ದಾಸ್ ಮಾತನಾಡಿ, ಬಿಜೆಪಿ ಒಂದು ಕುಟುಂಬದಂತೆ. ಮನೆಯ ಯಜಮಾನ ಪುತ್ರಿಯ ವಿವಾಹಕ್ಕೆ ತೆರಳದಿರಲು ಹೇಗೆ ಸಾಧ್ಯ ಎಂದು ಹೇಳಿ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ.

Write A Comment