ರಾಷ್ಟ್ರೀಯ

ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಎಂ.ಕರುಣಾನಿಧಿಗಿಂತ, ಸ್ಟಾಲಿನ್ ಜನಪ್ರಿಯ: ಸಮೀಕ್ಷೆ

Pinterest LinkedIn Tumblr

karunanidhiಚೆನ್ನೈ,: ತಮಿಳುನಾಡು ವಾರಪತ್ರಿಕೆಯೊಂದು ಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಯಾರು ಜನಪ್ರಿಯ ವ್ಯಕ್ತಿ ಎನ್ನುವ ಸಮೀಕ್ಷೆ ನಡೆಸಿದ್ದು, ಎಂ.ಕೆ.ಸ್ಟಾಲಿನ್ ತಮ್ಮ ತಂದೆ ಎಂ.ಕರುಣಾನಿಧಿಗಿಂತ ಜನಪ್ರಿಯತೆಯಲ್ಲಿ ಮುಂದಿದ್ದಾರೆ ಎಂದು ಪ್ರಕಟಿಸಿದೆ.
ಸಮೀಕ್ಷೆಯ ಪ್ರಕಾರ, ರಾಜ್ಯಾದ್ಯಂತ ಒಟ್ಟು 17 ಸಾವಿರ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಶೇ.60.5 ರಷ್ಟು ಜನ ಸ್ಟಾಲಿನ್ ಪರವಾಗಿದ್ದರೆ, ಉಳಿದ ಶೇ. 39.5 ರಷ್ಟು ಜನ ಎಂ.ಕರುಣಾನಿಧಿ ಸಿಎಂ ಸ್ಥಾನದ ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದಾರೆ.

ಸಮೀಕ್ಷೆಯಿಂದ ಸ್ಟಾಲಿನ್ ಬೆಂಬಲಿಗರಿಗೆ ಸಂತಸವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರುಣಾನಿಧಿಯವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುವುದಕ್ಕಿಂತ, ಸ್ಟಾಲಿನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ನಮಕ್ಕು ನಾಮೇ ಟೂರ್ ಕಾರ್ಯಕ್ರಮ ಅಂತ್ಯಗೊಳ್ಳುವ ಮುನ್ನವೇ ತಮ್ಮ ಉತ್ತರಾಧಿಕಾರಿಯಾಗಿ ಸ್ಟಾಲಿನ್ ಅವರನ್ನು ಘೋಷಿಸುತ್ತಾರೆಯೇ ಎನ್ನುವುದು ಕಾದುನೋಡಬೇಕಾಗಿದೆ. ಸ್ಟಾಲಿನ್ ಹಿರಿಯ ಸಹೋದರ ಎಂ.ಕೆ.ಅಳಗಿರಿ ತಾವು ಕೂಡಾ ಸಿಎಂ ಸ್ಥಾನದ ಅಭ್ಯರ್ಥಿ ಆಕಾಂಕ್ಷಿ ಎಂದಿದ್ದಾರೆ.

ಈಗಾಗಲೇ ರಾಜ್ಯದ ಸುಮಾರು 212 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿರುವ ಸ್ಟಾಲಿನ್, ಸಮೀಕ್ಷೆಯಿಂದ ಮತ್ತಷ್ಟು ಉಲ್ಲಸಿತರಾಗಿದ್ದು, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ ಉತ್ತರಾಧಿಕಾರಿಯಾಗುವ ಸಾಧ್ಯತೆಗಳಿವೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.

Write A Comment