ಲಾಸೇಂಜಲಿಸ್: ಅಮೆರಿಕಾದ ಕೊಲರ್ಯಾಡೊ ಜಿಲ್ಲೆಯ ಕ್ಲಿನಿಕ್ ಒಂದರಲ್ಲಿ ಶುಕ್ರವಾರ ಬಂಧೂಕು ದಾಳಿಕೋರ ಮತ್ತು ಪೊಲೀಸರ ನಡುವೆ ನಡೆದ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದಂತೆ ಮೂವರು ಮೃತಪಟ್ತಿದ್ದು 11 ಜನ ಗಾಯಗೊಂಡಿದ್ದಾರೆ.
ಈ ಸಾವುಗಳ ದುರಂತ ಎಂದಿರ್ವ ಕೊಲರ್ಯಾಡೊ ಅಟಾರ್ನಿ ಜನರಲ್ ಈ ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿರುವುದನ್ನು ತಿಳಿಸಿದ್ದಾರೆ. ಜನನ ನಿಯಂತ್ರಣ ವೈದ್ಯಕೀಯ ಕೇಂದ್ರದಲ್ಲಿ ನಡೆದ ಈ ದಾಳಿಯಿಂದ ಅಮೇರಿಕಾದಲ್ಲಿ ಹೆಚ್ಚುತ್ತಿರುವ ಗ್ಯಾನ್ ಸಂಸ್ಕೃತಿ ಬಗ್ಗೆ ಮತ್ತೆ ಟೀಕೆಗಳು ಕೇಳಿ ಬಂದಿವೆ.
ದಾಳಿ ನಡೆಸಿದ ಬಂಧೂಕುಧಾರಿ ಪೊಲೀಸರಿಗೆ ಶರಣಾಗಿದ್ದು ಅವನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಗುಂಡಿನ ದಾಳಿಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ, ಆದರೆ ‘ಗರ್ಭಪಾತ’ ವಿರೋಧಿ ಧಾರ್ಮಿಕ ವ್ಯಕ್ತಿಯೊಬ್ಬ ಕ್ಲಿನಿಕ್ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದಾಗಿದೆ ಎಂದು ಊಹಿಸಲಾಗಿದೆ.
