ಮಂಗಳೂರು,ನ.18: ಮಂಗಳೂರು ಥಿಯೋಸಾಫಿಕಲ್ ಸೊಸೈಟಿ ಆಶ್ರಯದಲ್ಲಿ ಆಯುರ್ವೇದ – ಜೀವನಶೈಲಿ ಕುರಿತು ಉಪನ್ಯಾಸ ಕಾರ್ಯಕ್ರಮ ಮಂಗಳವಾರ ನಗರದ ಕೊಡಿಯಾಲ್ ಬೈಲಿನ ಥಿಯೋ ಸಾಫಿಕಲ್ ಸೊಸೈಟಿ ಕಛೇರಿಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಆಯುಷ್ ಆಧಿಕಾರಿ ಡಾ. ದೇವದಾಸ್ ರವರು ಆಯುರ್ವೇದ – ಜೀವನ ಶೈಲಿಯ ಬಗ್ಗೆ ಉಪನ್ಯಾಸ ನೀಡಿದರು. ಭಾರತದ ಸಂಪಧ್ಬರಿತವಾದ ಆಯುರ್ವೇದ ಶಾಸ್ತ್ರವು ಎಕೈಕ ಮಾದರಿಯಾಗಿದ್ದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಆರೋಗ್ಯವಂತನ ಆರೋಗ್ಯ ಪಾಲನೆ ಹಾಗೂ ರೋಗಿಯ ರೋಗ ನಿವಾರಣೆ ಆಯುರ್ವೇದದ ಮುಖ್ಯ ಉದ್ದೇಶವಾಗಿರುತ್ತದೆ. ಇದರಲ್ಲಿ ದಿನಚರ್ಯ ಖೃತುಚರ್ಯ, ತ್ರಯೋಪಸ್ಥಂಭಗಳಾದ ಆಹಾರ, ನಿದ್ರೆ, ಬ್ರಹ್ಮಚರ್ಯೆ, ಸದ್‌ವೃತ್ತ, ವೇಗದಾರಣೆಯಿಂದಾಗುವ ರೋಗಗಳ ಬಗ್ಗೆ ಮಾಹಿತಿ ಅವರು ನೀಡಿದರು.
ಕೆನರಾ ಬ್ಯಾಂಕ್ ಶೇಡಿಗುಡ್ಡೆ ಶಾಖೆಯ ಸೀನಿಯರ್ ಮ್ಯಾನೇಜರ್ ಡಿ. ರಮೇಶ್ ನ್ಯಾಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಥಿಯೋ ಸಾಫಿಕಲ್ ಸೊಸೈಟಿಯ ಅಧ್ಯಕ್ಷ ಯು.ರಾಮ ರಾವ್ ಸ್ವಾಗತಿಸಿದರು.ಎಂ.ರಾಘವೇಂದ್ರ ಪ್ರಭು ಪರಿಚಯಿಸಿದರು.ಕಾರ್ಯದರ್ಶಿ ಚಿತ್ರಾ ಪ್ರಭು ವಂದಿಸಿದರು.
ಭಕ್ತಿ ಸಂಗೀತ ಕಾರ್ಯಕ್ರಮ :
ಉಪನ್ಯಾಸಕ್ಕೂ ಮುನ್ನ ಕೊಡಿಯಾಲ್ ಬೈಲ್ ನ ಕಲಾನಿಕೇತನ ಸಂಗೀತ ಶಾಲೆಯ ಶಿಕ್ಷಕಿ ಸಾವಿತ್ರಿ ರಾಮ ರಾವ್ ಹಾಗೂ ಶಿಷ್ಯವೃಂದದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು.
