ಮಂಗಳೂರು,ನ.14: ಖ್ಯಾತ ಸಮರ ಕಲೆ ಪ್ರವೀಣ ಚೀತಾ ಯಜ್ಞೇಶ್ ಶೆಟ್ಟಿ, ಜಪಾನ ಕರಾಟೆಡೊ ಗೊಜುರುಯುಂಕಿ ಸಂಸ್ಥೆ ನೀಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಂಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಪಾನಿನ ಶ್ರೇಷ್ಠ ಕರಾಟೆ ಪಟುಗಳಾದ ಹಿತೋಶಿ ಫುಕಟೊಶಿ ಹಾಗೂ ಕಲ್ಸಿಯೊಕಿ ಫುಟೊಕೊಶಿ ಪ್ರಶಸ್ತಿ ಪ್ರದಾನ ಮಾಡಿದರು.
ಯಜ್ಞೇಶ್ ಶೆಟ್ಟಿ ಈಗಾಗಲೇ ನಿರ್ಭಯ ಎಂಬ ಶಿರೋನಾಮೆಯಡಿಯಲ್ಲಿ ಮಹಿಳಾ ಸ್ವರಕ್ಷಣೆಗಾಗಿ ಎಂಟು ಲಕ್ಷ ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಅಷ್ಟೇ ಅಲ್ಲ 150 ಚಿತ್ರ ತಾರೆಯರಿಗೆ ಸ್ಟಂಟ್ ತರಬೇತಿ ನೀಡಿದ್ದಾರೆ. 1000 ಕ್ಕೂ ಹೆಚ್ಚು ಬೀದಿ ಮಕ್ಕಳಿಗೆ, 100ಕ್ಕೂ ಅಧಿಕ ವಿಶೇಷ ಮಕ್ಕಳನ್ನು ಕರಾಟೆಯಲ್ಲಿ ತರಬೇತುಗೊಳಿಸಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕಾ ನೀಡುವ `ಮಾರ್ಷಲ್ ಆರ್ಟ್ಸ್ ಹಾಲ್ ಆಫ್ ಫೇಮ್’ ಪ್ರಶಸ್ತಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇದ್ರ ಫಡ್ನವಿಸ್ ಅವರಿಂದ ಭಾರತ್ ಗೌರವ ಪ್ರಶಸ್ತಿ, ಶ್ರೀಲಂಕದ ಸ್ಟಿಮಾ ಪ್ರಶಸ್ತಿ, ರಾಜೀವ್ ಗಾಂಧಿ ಎಕ್ಸಲೆನ್ಸ್ ಅವಾರ್ಡ್ ಪಡೆದಿದ್ದರು. ಈ ವೇಳೆ ಭಾರತೀಯ ಒಲಿಂಪಿಕ್ ಸಂಘದ ಸಂಯೋಜಕ ನರೇಂದ್ರ ಮೋರ್, ಜಾರ್ಖಂಡ್‌ನ ಒಲಿಂಪಿಕ್ ಸಂಘದ ಕಾರ್ಯದರ್ಶಿ ಸುಧಾಂಶು ಉಪಸ್ಥಿತರಿದ್ದರು.

