ಬೀಜಿಂಗ್: ಹುಡುಗರು ಬೊಂಬೆಯಂತಹ ಹುಡುಗಿಯೊಂದಿಗೆ ಮದುವೆಯಾಗಲು ಬಯಸುತ್ತಾರೆ. ಆದರೆ ಯುವಕನೊಬ್ಬ ಜೀವವಿಲ್ಲದ ಬೊಂಬೆಯನ್ನೇ ಮದುವೆಯಾಗಿರುವ ಘಟನೆ ಚೀನಾದಲ್ಲಿ ನಡೆದಿದೆ.
28 ವರ್ಷದ ಈ ಚೀನಾದ ಹುಡುಗನಿಗೆ ಕ್ಯಾನ್ಸರ್ ಇದ್ದ ಕಾರಣ ಆತ ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ ಯುವಕನಿಗೆ ಸಾಯುವ ಮುನ್ನ ಮದುವೆಯಾಗಬೇಕು ಎಂಬ ಹಂಬಲವಿತ್ತಂತೆ. ಆದರೆ ಆತ ಸತ್ತ ನಂತರ ಯಾರೂ ತನಗಾಗಿ ಅಳಬಾರದು ಎಂದು ಬೊಂಬೆಯನ್ನು ಮದುವೆಯಾಗಲು ನಿರ್ಧರಿಸಿದ್ದನಂತೆ.
ಇದೀಗ ಈ ಯುವಕ ಬೊಂಬೆಯನ್ನು ಮದುವೆಯಾಗಿರುವುದಲ್ಲದೆ ಅದರ ಜೊತೆ ಫೋಟೋಶೂಟ್ ಸಹ ಮಾಡಿಸಿದ್ದಾನೆ. ಬೊಂಬೆಗೆ ವಧುವಿನಂತೆ ಅಲಂಕಾರ ಮಾಡಿ ವಿವಿಧ ಭಂಗಿಗಳಲ್ಲಿ ಫೋಟೋ ತೆಗಿಸಿದ್ದಾನೆ. ಕೆಲವು ಫೋಟೋಗಳಲ್ಲಂತೂ ವಧುವಿನ ರೀತಿಯಲ್ಲಿರುವುದು ಬೊಂಬೆ ಎಂಬುದೇ ಗೊತ್ತಾಗದಂತೆ ನಿಜವಾದ ಜೋಡಿಯಯಂತೆ ಕಾಣಿಸುತ್ತಾರೆ.
ಇಲ್ಲಿಯವರೆಗೂ ಯುವಕನ ಹೆಸರು ಮತ್ತು ಆತನ ಹಿನ್ನಲೆ ಮಾತ್ರ ತಿಳಿದುಬಂದಿಲ್ಲ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈತನ ಮದುವೆಯ ಫೋಟೋಗಳು ವೈರಲ್ ಆಗಿದೆ.
