ಕನ್ನಡ ವಾರ್ತೆಗಳು

ಉಡುಪಿ: ದತ್ತು ಸ್ವೀಕಾರ ಕೇಂದ್ರದಿಂದ ಇಬ್ಬರು ಬಾಲಕರು ಪರಾರಿ..?

Pinterest LinkedIn Tumblr

Udp_Boys_missing

ಉಡುಪಿ: ನಗರದ ಕೃಷ್ಣಾನುಗ್ರಹ ಮತ್ತು ದತ್ತು ಸ್ವೀಕಾರ ಕೇಂದ್ರಕ್ಕೆ ಮಕ್ಕಳ ಕಲ್ಯಾಣ ಸಮಿತಿ 2 ತಿಂಗಳ ಹಿಂದೆ ಸೇರಿಸಿದ ದಾವಣಗೆರೆ ಮೂಲದ ಮಳೆಬೆನ್ನೂರಿನ ಭರತ್(15) ಹಾಗೂ 2 ದಿನಗಳ ಹಿಂದೆ ವಿಶುಶೆಟ್ಟಿ ಎಂಬವರು ಸೇರಿಸಿದ ಬಿಜಾಪುರದ ಕಿರಣ್(13) ಎಂಬವರು ಗುರುವಾರ ಮಧ್ಯಾಹ್ನದ ವೇಳೆಗೆ ಸಂಸ್ಥೆಯಿಂದ ನಾಪತ್ತೆಯಾಗಿದ್ದಾರೆ.

ಬಾಲಕರು ನಾಪತ್ತೆಯಾಗಿರಬಹುದೇ ಅಥವಾ ಯಾರಾದರೂ ಕರೆದೊಯ್ದಿಬಹುದೇ ಎಂಬ ನಿಟ್ಟಿನಲ್ಲಿ ಸಂಸ್ಥೆಯ ಮ್ಯಾನೇಜರ್ ಉದಯ್ ಕುಮಾರ್ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಾಲಕರ ನಿಗೂಢ ನಾಪತ್ತೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Write A Comment