ಬೆಂಗಳೂರು: ಸ್ಯಾಂಡಲ್ವುಡ್ ಮಳೆ ಹುಡುಗ ಗೊಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕಾಂಬೀನೇಷನ್ನಲ್ಲಿ ಚಿತ್ರವೊಂದು ಮೂಡಿಬರಲಿದೆಯಂತೆ. ಈ ಬಗ್ಗೆ ಈಗಾಗಲೇ ಚಿಂತನೆಗಳು ನಡೆದಿವೆಯಂತೆ.
ಗಣೇಶ್ ಮುಂಗಾರು ಮಳೆ 2 ಜೊತೆಗೆ ತೆಲುಗಿನ ರಿಮೇಕ್ ಪಟಾಸ್ನ ಪಟಾಕಿ, ಝೂಮ್, ಸ್ಟೈಲ್ಕಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇದೀಗ ಗಣೇಶ್ ರಾಕ್ಲೈನ್ ವೆಂಕಟೇಶ್ ಚಿತ್ರದಲ್ಲೂ ನಟಿಸಲಿದ್ದಾರಂತೆ.
ರಾಕ್ಲೈನ್ ವೆಂಕಟೇಶ್ ಬಾಲಿವುಡ್ನ ಭಜರಂಗಿ ಬಾಯಿಜಾನ್ನಂತಹ ಸೂಪರ್ ಹಿಟ್ ಚಿತ್ರ ನೀಡಿದ್ದರು. ಇದೀಗ ತೆಲುಗಿನಲ್ಲಿ ನಾನಿ ಅಭಿನಯದ ಈ ವರ್ಷದ ಸೂಪರ್ ಹಿಟ್ ಮೂವಿ ಭಲೇ ಭಲೇ ಮಗಾಡಿವೋಯ್ ಚಿತ್ರವನ್ನು ಸ್ಯಾಂಡಲ್ವುಡ್ಗೆ ತರುವ ಚಿಂತನೆ ನಡೆಸಿದ್ದಾರೆ. ಈ ಚಿತ್ರಕ್ಕೆ ಗಣೇಶ ನಾಯಕನಾಗುವ ಲಕ್ಷಣಗಳಿವೆ ಎನ್ನುತ್ತಿದೆ ಗಾಂಧಿನಗರ.
