ದುಬೈ, ಅ.29: ದುಬೈಯ ದೇರಾದ ಅಲ್ ಮುತೀನಾದ ಶೆರಟಾನ್‌ನಲ್ಲಿ ನಾಳೆ(ಅ.30) ಯುಎಇಯ ದುಬೈ ದೇವಾಡಿಗಾಸ್ ಇದರ 23ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿರುವ ದೇವಾಡಿಗ ಫ್ಯಾಮಿಲಿ ಡೇ(ಕುಟುಂಬದ ಸ್ನೇಹಮಿಲನ)ಗೆ ಭರದ ಸಿದ್ಧತೆ ಕೈಗೊಳ್ಳಲಾಗಿದೆ. ಸಂಘದ ಅಧ್ಯಕ್ಷರೂ, ಖ್ಯಾತ ಗಾಯಕರೂ ಹಾಗೂ ದುಬೈಯ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ಗಣ್ಯಾತಿಗಣ್ಯರು, ಕಲಾವಿದರು ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ಈಗಾಗಲೇ ದುಬೈಗೆ ಆಗಮಿಸಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಬುಧಾಬಿಯ ನ್ಯೂ ಮೆಡಿಕಲ್ ಸೆಂಟರ್ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿ ಭಾಗವಹಿಸಲಿದ್ದಾರೆ.

ಖ್ಯಾತ ಉದ್ಯಮಿ ಹಾಗೂ ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಮತ್ತು ಖ್ಯಾತ ವೈದ್ಯ ಡಾ. ಕೆ.ವಿ.ದೇವಾಡಿಗ, ಸಂಸ್ಥಾಪನಾ ಸದಸ್ಯ ಪದ್ಮವಲ್ಲಿ ಸಂಜಯ್ ದೇವಾಡಿಗ, ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಸಿಂಧು ಭೈರವಿ ಮತ್ತು ಮಚೇಂದ್ರನಾಥ ಮಂಗಳಾದೇವಿ, ಮಂಗಳೂರಿನ ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಶೆಟ್ಟಿ, ಯುಎಇ ಎಕ್ಸ್‌ಚೇಂಜ್‌ನ ಸಿಇಒ ಸುಧೀರ್ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್‌ನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಚಿಲ್ಲಿ ವಿಲ್ಲಿಯ ಸಿಇಒ ಹಾಗೂ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ವೆಂಕಟರಮಣ, ಬಾರ್ಕೂರಿನ ಏಕನಾಥೇಶ್ವರಿ ದೇವಾಲಯದ ಟ್ರಸ್ಟಿ ಅಣ್ಣಯ್ಯ ಶೇರಿಗಾರ್, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಎಚ್. ಮೋಹನ್‌ದಾಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಇದೇ ವೇಳೆ ದೇವಾಡಿಗ ಫ್ಯಾಶನ್ ಷೋ, ಆಕರ್ಷಕ ಹಾಗೂ ಮನಮೋಹಕ ನೃತ್ಯ ಮತ್ತು 2014ರಲ್ಲಿ ದುಬೈಯಲ್ಲಿ ನಡೆದ ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆಯ ರನ್ನರ್ಸ್ ತಂಡದಿಂದ ಹಾಸ್ಯ ಪ್ರದರ್ಶನ ನಡೆಯಲಿದೆ. ಹರೀಶ್ ಶೆರಿಗಾರ್, ವಿಜಯ ಭಟ್, ಅಕ್ಷತಾ ರಾವ್, ಸುರೇಶ್ ದೇವಾಡಿಗ ಮತ್ತಿತರರು ಇಂಪಾದ ಹಾಡುಗಳಿಂದ ಮನರಂಜಿಸಲಿದೆ. ಮಾತ್ರವಲ್ಲ ಆಕರ್ಷಕ ಬಹುಮಾನ ಪಡೆಯುವ ಸ್ಪರ್ಧೆ ನಡೆಯಲಿದೆ. ಯುಎಇಯಲ್ಲಿ ನೆಲೆಸಿರುವ ಎಲ್ಲಾ ದೇವಾಡಿಗ ಸಮುದಾಯದವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹರೀಶ್ ಶೇರಿಗಾರ್ ಮನವಿ ಮಾಡಿದ್ದಾರೆ.



