ಮನೋರಂಜನೆ

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಲಿ: ಸಚಿನ್ ಸಲಹೆ

Pinterest LinkedIn Tumblr

sachin

ಲಂಡನ್ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಬೇಕು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ‘ಟ್ವೆಂಟಿ–20 ಕ್ರಿಕೆಟ್ ಮಾದರಿಯು ಒಲಿಂಪಿಕ್ಸ್‌ಗೆ ಸೂಕ್ತವಾಗಿದೆ. ಕ್ರಿಕೆಟ್‌ ಬಗ್ಗೆ ತಿಳಿಯದ ಕೆಲವು ದೇಶಗಳ ಜನರಿಗೆ ಆಟವನ್ನು ಪರಿಚಯಿಸಲು ಈ ಮಾದರಿ ಅತ್ಯಂತ ಸಮರ್ಪಕವಾಗಿದೆ’ ಎಂದು ಸಚಿನ್ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಟಿ20 ಮಾದರಿಯ ಪಂದ್ಯವು ಮೂರು ಗಂಟೆಗಳಲ್ಲಿ ಮುಗಿಯುತ್ತದೆ. ಬೇರೆ ಯಾವುದೇ ಕ್ರೀಡೆಯಂತೆಯೇ ಇದು ಕೂಡ ಚುಟುಕು ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತದೆ. ವೀಕ್ಷಕರಿಗೆ ಮನ ರಂಜನೆಯನ್ನೂ ನೀಡುತ್ತದೆ’ ಎಂದು ಹೇಳಿದರು.

1900ನೇ ಇಸವಿಯಿಂದ ಇಲ್ಲಿಯವ ರೆಗೆ ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ಗೆ ಸೇರಿಸಿಲ್ಲ. ಮುಂದಿನ ತಿಂಗಳು ನಡೆಯಲಿ ರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪ ಡೆಯಾಗಬೇಕು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಕೂಡ ಆಗ್ರಹಿಸಿದ್ದಾರೆ.

ಸಿದ್ಧತೆ ಆರಂಭಿಸಿದ ಸಚಿನ್: ಅಮೆರಿಕದಲ್ಲಿ ನಡೆಯುವ ಆಲ್‌ ಸ್ಟಾರ್ ಕ್ರಿಕೆಟ್‌ ಲೀಗ್‌ನಲ್ಲಿ ಆಡಲು ಸಚಿನ್ ತೆಂಡೂಲ್ಕರ್ ಮುಂಬೈನಲ್ಲಿ ಮಂಗಳ ವಾರ ಅಭ್ಯಾಸ ಆರಂಭಿಸಿದರು.

ಮುಂದಿನ ತಿಂಗಳು ನಡೆಯುವ ಮೂರು ಪ್ರದರ್ಶನ ಪಂದ್ಯಗಳಲ್ಲಿ (ಟಿ20) ಅವರು ಆಡುವರು. ಸುಮಾರು ಒಂದೂವರೆ ವರ್ಷದ ನಂತರ ಅವರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅಮೆರಿಕದಲ್ಲಿ ನಮ್ಮ ಟೂರ್ನಿಗೆ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪ ಡಿಸಿದರು.

‘ಟೂರ್ನಿಯಲ್ಲಿ ಆಡುವ ತಂಡ ಗಳನ್ನು ಇನ್ನೂ ಆಯ್ಕೆ ಮಾಡಿಲ್ಲ. ಶೀಘ್ರ ದಲ್ಲಿ ಮಾಡಲಿದ್ದೇವೆ. ಆದರೆ, ಒಂದು ಸಂತಸದ ವಿಷಯವೆಂದರೆ ವೀರೇಂದ್ರ ಸೆಹ್ವಾಗ್ ಕೂಡ ಆಡುವರು. ಮ್ಯಾಥ್ಯೂ ಹೇಡನ್, ಸೌರವ್ ಗಂಗೂಲಿ ಮತ್ತು ವೀರೂ ಆಡುವುದು ಖಚಿತವಾಗಿರು ವುದು ಖುಷಿಯಾಗಿದೆ’ ಎಂದರು.

Write A Comment