ಅಂತರಾಷ್ಟ್ರೀಯ

ಮುಖ ಸುಂದರವಾಗಿ ಕಾಣಲು ಹೀಗೆ ಮಾಡಿ…

Pinterest LinkedIn Tumblr

Beautiful Girl Touching Her Face. Isolated on a White Background. Perfect Skin. Beauty Face. Professional Makeup

ಎಲ್ಲರ ತ್ವಚೆ ಒಂದೇ ರೀತಿ ಇರುವುದಿಲ್ಲ. ಕೆಲವರದ್ದು, ಎಣ್ಣೆ ತ್ವಚೆ, ಸಾಧಾರಣ, ಮತ್ತು ಒಣ ತ್ವಚೆ ಇರುತ್ತದೆ. ಹೀಗಾಗಿ ಎಷ್ಟೋ ಜನ ತಮ್ಮ ತ್ವಚೆಗೆ ಯಾವ ಆರೈಕೆ ಒಳ್ಳೆಯದು ಎನ್ನುವುದನ್ನು ತಿಳಿಯದೇ ತ್ವಚೆಯ ಆರೈಕೆ ಮಾಡುತ್ತಾರೆ. ಇದರಿಂದ ಯಾವುದೇ ಪ್ರತಿಫಲ ಸಿಗುವುದಿಲ್ಲ.

ಒಣ ಚರ್ಮ:
* ಬಾಳೆಹಣ್ಣಿಗೆ ಸ್ವಲ್ಪ ಮೊಸರು ಮಿಶ್ರಣ ಮಾಡಿ ಮುಖಕ್ಕೆ ದಪ್ಪವಾಗಿ ಹಚ್ಚಿ ಸ್ವಲ್ಪ ಸಮಯ ಬಿಡಬೇಕು. ಹೀಗೆ ಮಾಡುತ್ತ ಬಂದರೆ ಒಣ ತ್ವಚೆ ನಿವಾರಣೆಯಾಗುತ್ತದೆ.

* ತಾಜಾ ಹಾಲಿನ ಕೆನೆಗೆ ಸ್ವಲ್ಪ ಜೇನುತುಪ್ಪ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 1 ಗಂಟೆಯ ಬಳಿಕ ಸ್ನಾನ ಮಾಡಿದರೆ ಚರ್ಮಕ್ಕೆ ಹೊಳಪು ಬರುತ್ತದೆ.

* ರೋಸ್ ವಾಟರ್‍ನ್ನು ಮುಖಕ್ಕೆ ಹಚ್ಚಿದರೆ ಒಣ ತ್ವಚೆ ಮಾಯವಾಗುತ್ತದೆ.

* ಸೀಬೆ ಹಣ್ಣಿನ ತಿರುಳಿಗೆ ಜೇನು ಬೆರೆಸಿ ಮಿಶ್ರಣ ಮಾಡಿ ಆ ಪೇಸ್ಟ್‍ನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ ಒಣ ಚರ್ಮ ನಿವಾರಿಸಬಹುದು.

ಎಣ್ಣೆ ತ್ವಚೆ:
* ಮುಲ್ತಾನಿಮಿಟ್ಟಿ ಪೌಡರ್‍ನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖ ಹಾಗೂ ಕೈ ಕಾಲುಗಳಿಗೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ ಚರ್ಮದ ಹೊಳಪು ಹೆಚ್ಚುತ್ತದೆ.

* ರಕ್ತಚಂದನವನ್ನು ನೀರಿನಲ್ಲಿ ತೇದಿ ಅದಕ್ಕೆ 4 ಚಮಚ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿನ ಎಣ್ಣೆಯ ಅಂಶ ನಿವಾರಿಸಬಹುದು.

* ಸೇಬು ಹಣ್ಣಿನ ತಿರುಳಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಮುಖಕ್ಕೆ ಹಚ್ಚಿ ತೊಳೆಯಿರಿ.

* ಅಧಿಕ ಎಣ್ಣೆ ಅಂಶ ಇದ್ದರೆ ಪುದೀನಾ, ರೋಸ್ ವಾಟರ್ ಬೆರೆಸಿ ಹಚ್ಚಿ ತೊಳೆಯಿರಿ.

ಸಾಮಾನ್ಯ ತ್ವಚೆ:
* ಬಾದಾಮಿಯನ್ನು ನೆನೆಸಿ ಅದೇ ನೀರಲ್ಲಿ ಗುಲಾಬಿ ದಳಗಳೊಂದಿಗೆ ಅರೆಯಬೇಕು, ಇದಕ್ಕೆ ಶುದ್ಧ ಕರ್ಪೂರ ಬೆರೆಸಿ ಮುಖಕ್ಕೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ 20 ನಿಮಿಷದ ನಂತರ ತೊಳೆಯಿರಿ.

* ಎಳೆನೀರಿಗೆ ಹತ್ತಿಯಲ್ಲಿ ಅದ್ದಿ ಮುಖಕ್ಕೆ ಹಚ್ಚಿ ನಂತರ ತೊಳೆದರೆ ಮುಖದಲ್ಲಿ ಹೊಳಪು ಕಾಣುತ್ತದೆ.

* ಕ್ಯಾರೆಟ್ ತುರಿ, ಅರ್ಧ ಮೊಟ್ಟೆಯ ಬಿಳಿಭಾಗ ಸ್ವಲ್ಪ ಹಾಲು ಇದನ್ನು ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷ ಬಿಟ್ಟು ತೊಳೆದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

Write A Comment