ಅಂತರಾಷ್ಟ್ರೀಯ

ಭೂಕಂಪಕ್ಕೆ ಪಾಕಿಸ್ತಾನದಲ್ಲಿ 13 ಜನರ ಸಾವು

Pinterest LinkedIn Tumblr

32

ಇಸ್ಲಾಮಾಬಾದ್: ಅಪ್ಘಾನಿಸ್ಥಾನದ ಕೇಂದ್ರವಾಗಿದ್ದ ಭೂಕಂಪನದಿಂದ ಪಾಕಿಸ್ತಾನದಲ್ಲೂ ಭೂಮಿ ಪ್ರಬಲವಾಗಿ ನಡುಗಿದ್ದು ಇಬ್ಬರು ಮಕ್ಕಳೂ ಸೇರಿ ಕನಿಷ್ಠ 13 ಜನ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದೆ.

ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್, ಸರ್ಗೋಡ ಮುಂತಾದ ನಗರಗಳಲ್ಲಿ ಭೂಕಂಪನದ ವರದಿಯಾಗಿದೆ. ಅಪ್ಘಾನಿಸ್ಥಾನದ ಗಡಿಯಲ್ಲಿರುವ ಬಜೌರ್ ಆದಿವಾಸಿ ಪ್ರದೇಶದಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಈ ಭೂಕಂಪನದಲ್ಲಿ 10ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿವೆ. ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸಿಮ್ ಬಾಜ್ವಾ ತಿಳಿಸಿದ್ದಾರೆ. ಭೂಕಂಪನ ತೀವ್ರತೆ ರಿಕ್ಟರ್ ಮಾಪನದಲ್ಲಿ 7.7ರಷ್ಟಿತ್ತು ಎಂದು ತಿಳಿದುಬಂದಿದೆ.

Write A Comment