ಮನೋರಂಜನೆ

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು

Pinterest LinkedIn Tumblr

south-africaಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ.

ವಾಂಖಡೇ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 214 ರನ್ ಗಳಿಂದ ಹೀನಾಯ ಸೋಲು ಅನುಭವಿಸಿದ್ದು, 3-2 ರಿಂದ ಸರಣಿಯನ್ನು ದಕ್ಷಿಣ ಆಫ್ರಿಕಾ ಕೈವಶ ಮಾಡಿಕೊಂಡಿದೆ.

ಭಾರತ ಪರ ರೋಹಿತ್ ಶರ್ಮಾ 16, ಶಿಖರ್ ಧವನ್ 60, ವಿರಾಟ್ ಕೊಹ್ಲಿ 7, ಅಂಜಿಕ್ಯಾ ರಹಾನೆ 87 ಹಾಗೂ ಸುರೇಶ್ ರೈನಾ 12 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ.

ನಾಯಕ ಧೋನಿ ತಾಳ್ಮೆಯ ಆಟವಾಡಿದರು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. 27 ರನ್ ಗಳಿಸಿದ್ದ ಧೋನಿ ಇಮ್ರಾನ್ ತಾಹಿರ್ ಎಸೆತದಲ್ಲಿ ಬೌಲ್ಡ್ ಆದರು. ಅಕ್ಷರ ಪಟೇಲ್ 5, ಹರ್ಭಜನ್ ಸಿಂಗ್ 0, ಭುವನೇಶ್ವರ್ 1, ಅಮಿತ್ ಮಿಶ್ರಾ 4, ಮೋಹಿತ್ ಶರ್ಮಾ ಅಜೇಯ 0 ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ ರಬಾಡಾ 4, ಸ್ಟೇನ್ 3, ಇಮ್ರಾನ್ ತಾಹಿರ್ 2 ಹಾಗೂ ಅಬ್ಬೋಟ್ 1 ವಿಕೆಟ್ ಪಡೆದಿದ್ದಾರೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದ. ಆಫ್ರಿಕಾ ಪರ ಆರಂಭಿಕ ಆಟಗಾರ ಕ್ಲಿಂಟನ್‌ ಡಿ ಕಾಕ್‌ 109 ರನ್ ಸಿಡಿಸಿ ಔಟಾದರು. ಆಮ್ಲಾ 13 ಎಸೆತಗಳಲ್ಲಿ 23 ರನ್ ಗಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಎಬಿಡಿ ವಿಲಿಯರ್ಸ್ ಕೇಲವ 61 ಎಸೆತಗಳಲ್ಲಿ 119 ರನ್ ಸಿಡಿಸಿದರು. ಡುಪ್ಲೇಸಿಸ್ ಸಹ ಭರ್ಜರಿ ಬ್ಯಾಟಿಂಗ್ ನೊಂದಿಗೆ 115 ಎಸೆತಗಳಲ್ಲಿ 133 ರನ್ ಸಿಡಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಬೇಹರ್ಡಿನ್ 16 ರನ್ ಗಳಿಸಿ ಔಟಾದರೆ ಡೇವಿಡ್ ಮಿಲ್ಲರ್ ಅಜೇಯ 22 ಹಾಗೂ ಹಿಲ್ಗರ್ ಅಜೇಯ 5 ರನ್ ಗಳಿಸಿದ್ದಾರೆ.

ಭಾರತದ ಪರ ಮೋಹಿತ್‌ ಶರ್ಮಾ, ಭುವನೇಶ್ವರ್ ಕುಮಾರ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ತಲಾ  1 ವಿಕೆಟ್‌ ಪಡೆದಿದ್ದಾರೆ.

Write A Comment