ನವದೆಹಲಿ, ಅ.25: ರಾಷ್ಟ್ರ ರಾಜಧಾನಿಯಲ್ಲಿ ಮತೊಂದು ಅತ್ಯಾಚಾರ ಪ್ರಕರಣ ನಡೆದಿದ್ದು ಮತ್ತೆ ಜನತೆಯನ್ನು ಬೆಚ್ಚಿ ಬೀಳಿಸಿದೆ. 9 ವರ್ಷದ ಬಾಲಕಿಯ ಮೇಲೆ ಸ್ವತಃ ಆಕೆಯ ಚಿಕ್ಕಪ್ಪನೇ ಅತ್ಯಾಚಾರವೆಸಗಿರುವ ದುರ್ಘಟನೆ ದೆಹಲಿಯ ವಾಯವ್ಯ ಭಾಗದಲ್ಲಿ ವರದಿಯಾಗಿದೆ.
ಇಲ್ಲಿನ ಸ್ವರೂಪ್ ನಗರದ ಮನೆಯಲ್ಲಿ ಬಾಲಕಿ ಒಂಟಿಯಾಗಿದ್ದ ವೇಳೆ ಆರೋಪಿ ಮೆನೆಗೆ ಬಂದು ಬಳಿಕ 10 ರೂ. ನೀಡಿ ಚಾಕೋಲೇಟ್ ತರುವಂತೆ ಹೇಳಿ ತನ್ನ ಮನೆಗೆ ಕರೆದಿದ್ದಾನೆ ಆನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.ಅತ್ಯಾಚಾರವೆಸಗಿದ 44 ವರ್ಷದ ಅತ್ಯಾಚಾರಿ ಆರೋಪಿಯನ್ನು ಪೆÇಲೀಸರು ಬಂಧಿಸಿ ತೀವ್ರ ವಿಚಾರಣೆಗೊಳ್ಳಪಡಿಸಿದ್ದಾರೆ.
ಈ ಕುರಿತು ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ. ಆದರೆ ಬಳಿಕ ಬಾಲಕಿ ತನ್ನ ತಾಯಿಗೆ ಅತ್ಯಾಚಾರದ ಕುರಿತು ಹೇಳಿದ ನಂತರ ಪೆÇಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಆರೋಪಿ ಇದಕ್ಕೂ ಮುನ್ನ ಬಾಲಕಿಗೆ ಬಲವಂತವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿದ್ದನಂತೆ. ಆದರೆ ಆತನ ಭಯದಿಂದ ಬಾಲಕಿ ಈ ಕುರಿತು ಯಾರಿಗೂ ಹೇಳಿರಲಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ . ಪ್ರಕರಣ ದಾಖಲಿಸಿಕೊಂಡ ಸ್ವರೂಪ್ ನಗರದ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
