ಮನೋರಂಜನೆ

ಬಾಹುಬಲಿ-3ನೆ ಭಾಗ ಮಾಡಲ್ಲ…ಇದು ಕೇವಲ ಗಾಸಿಪ್: ನಿರ್ದೇಶಕ ರಾಜಮೌಳಿ ಸ್ಪಷ್ಟನೆ

Pinterest LinkedIn Tumblr

rajamouli-and-bahubali

ಹೈದರಾಬಾದ್: ಭಾರತೀಯ ರಂಗದಲ್ಲಿ ತನ್ನ ಮೇಕಿಂಗ್ ಮತ್ತು ಬಜೆಟ್ ನಿಂದಲೇ ಭಾರಿ ಸುದ್ದಿಗೆ ಗ್ರಾಸವಾಗಿ ಭಾರಿ ಯಶಸ್ಸುಗಳಿಸಿದ್ದ ಬಾಹುಬಲಿ ಚಿತ್ರದ ಮೂರನೇ ಭಾಗ ಮಾಡುವುದಿಲ್ಲ ಎಂದು ನಿರ್ದೇಶಕ ಎಸ್ ಎಸ್ ರಾಜಮೌಳಿ ಹೇಳಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಚಿತ್ರಗಳ ದಾಖಲೆ ನಿರ್ಮಿಸಿರುವ ಬಾಹುಬಲಿ ಚಿತ್ರದ ಎರಡನೇ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರ ಮೂರನೇ ಭಾಗಕ್ಕೂ ಮುಂದುವರೆಯುತ್ತದೆ ಎಂದು ಫಿಲ್ಮ್ ನಗರದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಬಾಹುಬಲಿ ಕಥೆ ದೊಡ್ಡದಿದ್ದು, ಎರಡು ಭಾಗಗಳಲ್ಲಿ ಸಂಪೂರ್ಣ ಕಥೆಯನ್ನು ವಿವರಿಸಲು ಸಾಧ್ಯವಿಲ್ಲ. ಹೀಗಾಗಿ ಚಿತ್ರದ ಮೂರನೇ ಭಾಗಕ್ಕೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಆಲೋಚಿಸಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು.

ಈ ಎಲ್ಲ ಊಹಾಪೋಹಗಳಿಗೆ ಸ್ವತಃ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ತೆರೆ ಎಳೆದಿದ್ದು, ತಾವು ಚಿತ್ರದ ಮೂರನೇ ಭಾಗ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜಮೌಳಿ, ಇಂತಹ ಗಾಸಿಪ್ ಗಳನ್ನು ಯಾರು, ಎಲ್ಲಿಂದ ಹರಿಬಿಡುತ್ತಾರೆಯೋ ತಿಳಿಯದು.

ಸದ್ಯದ ಮಟ್ಟಿಗಂತೂ ಈ ಹಿಂದೆ ನಿಗದಿಯಾದಂತೆ ಬಾಹುಬಲಿ ಚಿತ್ರವನ್ನು ಎರಡನೇ ಭಾಗಕ್ಕೆ ಅಂತ್ಯಗೊಳಿಸಲಾಗುತ್ತದೆ. ಕಥೆಯನ್ನು ಮೂರನೇ ಭಾಗಕ್ಕೂ ತೆಗೆದುಕೊಂಡು ಹೋಗುವ ಯಾವುದೇ ಆಲೋಚನೆಗಳಿಲ್ಲ. ಒಂದು ವೇಳೆ ಯಾವುದೇ ಬದಲಾವಣೆ ಬೇಕೆನಿಸಿದರೆ ನಾನೇ ಖುದ್ದು ಹೇಳುತ್ತೇನೆ ಎಂದು ರಾಜಮೌಳಿ ಹೇಳಿದ್ದಾರೆ.

Write A Comment