ಕನ್ನಡ ವಾರ್ತೆಗಳು

ಕುಂದಾಪುರ: ವಲಸೆ ಕಾರ್ಮಿಕರಿಗೆ ಖಾಯಿಲೆ ಗುಣಪಡಿಸುವ ಆಮೀಷವೊಡ್ಡಿ ‘ಪ್ರೇಯರ್’ ಮಾಡಿಸ್ತಾರಂತೆ..?

Pinterest LinkedIn Tumblr

ಕುಂದಾಪುರ: ವಲಸೆ ಕಾರ್ಮಿಕರು ಕಷ್ಟ ಜೀವಿಗಳು, ಊರಲ್ಲಿ ಏಕ್ರೆಗಟ್ಟಲೇ ಜಮೀನಿದ್ದರೂ ಅದು ಏನು ಪ್ರಯೋಜನಕ್ಕಿಲ್ಲ. ಯಾಕದ್ರೇಂ ಅಲ್ಲಿ ಮಳೆಯೇ ಬರೊಲ್ಲ, ಮಳೆಯಿಲ್ಲದೇ ಬೇಸಾಯ, ಫಸಲು ಇಲ್ಲ…ಆದರೇ ಹೊಟ್ಟೆ ಪಾಡಿಗಾದರೇನಾಗಬೇಕಲ್ಲ. ಅದೇ ಚಿಂತೆಯಲ್ಲೇ ಕೂಲಿ ಮಾಡಿ ದಿನಗೂಲಿ ಮಾಡಿಯಾದರೂ ತುತ್ತಿನ ಚೀಲ ತುಂಬಿಸಿಕೊಳ್ಳಬೇಕೆನ್ನುವ ಹಂಬಲದಲ್ಲಿ ದೂರದ ಕೊಪ್ಪಳ ಜಿಲ್ಲೆಯ ಆಸುಪಾಸಿನವರಾದ ಈ ಮಂದಿ ಬಂದಿದ್ದು ಉಡುಪಿ ಜಿಲ್ಲೆಯ ಕುಂದಾಪುರಕ್ಕೆ. ಆದ್ರೇ ಏನೋ ಕಷ್ಟ ಏನೋ ಅನಾರೋಗ್ಯ..ಆದ್ರೇ ಇವರು ಹೋಗೋದು ಆಸ್ಪತ್ರೆಗಲ್ಲ.. ಇವರ ಅಸಹಾಯಕತೆ ದುರುಪಯೋಗಿಸಿಕೊಂಡು ಯಾಮಾರಿಸುವ ಇನ್ಯಾರದೋ ಮಾತು ಕೇಳಿ ಇವರು ಕುಂದಾಪುರ ಹೊರವಲಯದ ಆಸುಪಾಸಿನಲ್ಲಿರುವ ಯಾವುದೋ ಒಂದು ಮನೆಗೆ ಪ್ರೇಯರ್ (ಪ್ರಾರ್ಥನೆ) ಮಾಡೋಕೆ ಹೋಗ್ತಾರೆ.

ಇದೆಲ್ಲಾ ನಡೆದಿದ್ದು ಕುಂದಾಪುರ ಹೊರವಲಯದ ಕೋಡಿ ಆಸುಪಾಸಿನಲ್ಲಿ. ವಲಸೆ ಕಾರ್ಮಿಕರಾದ ಈ ಕಷ್ಟ ಜೀವಿಗಳು ಕುಂದಾಪುರದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಸಮೀಪ ಬಿಡಾರ ಹೂಡಿಕೊಂಡು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಇವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಬಿಟ್ಟು ಪ್ರೇಯರ್ ಮಾಡೋಕೆ ಹೋಗಿದ್ದು ಇವರ ಮುಗ್ಧತೆ. ಮೇಲ್ನೋಟಕ್ಕೆ ಇಂದೊದು ತಂತ್ರಗಾರಿಕೆಯ ಚೈನ್ ಲಿಂಕ್ ರೀತಿ ಕಾಣುವ ಈ ವ್ಯವಸ್ಥಿತ ಪಿತೂರಿ ಧರ್ಮವೊಂದರ ಪ್ರಚಾರ ಹಾಗೂ ಬೇರೆಯವರನ್ನು ಅವರ ಧರ್ಮದತ್ತ ಸೆಳೆಯುವ ತಂತ್ರಗಾರಿಕೆ ಎನ್ನಲಾಗುತ್ತಿದೆ. ಈ ಅಮಾಯಕರು ಖಾಯಿಲೆ ಗುಣವಾಗುತ್ತದೆಂಬ ನಂಬಿಕೆಯಲ್ಲಿಯೇ ಅಲ್ಲಿಗೆ ತೆರಳಿದ್ದಾರೆನ್ನಲಾಗಿದೆ. ಈ ಪ್ರಕ್ರಿಯೆ ಕೆಲವು ತಿಂಗಳುಗಳಿಂದ ಕುಂದಾಪುರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು ಈ ತಂತ್ರದಲ್ಲಿ ಇಂತಹದೇ ಹಲವು ವಲಸೆ ಕಾರ್ಮಿಕರನ್ನು ‘ಕುರಿ’ ಮಾಡಲಾಗುತ್ತಿದೆ ಎನ್ನಲಾಗಿದೆ.

Kodi_KndpR_Valase karmikaru (2) Kodi_KndpR_Valase karmikaru (3) Kodi_KndpR_Valase karmikaru (4) Kodi_KndpR_Valase karmikaru (1) Kodi_KndpR_Valase karmikaru (5) Kodi_KndpR_Valase karmikaru (6)

ಕುಂದಾಪುರದ ಆಸುಪಾಸಿನ ನಾಲ್ಕೈದು ಮಂದಿ ತಮ್ಮ ಧರ್ಮದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಅದರಲ್ಲೊಬ್ಬನ ಮಾರುತಿ ಓಮ್ನಿ ಕಾರಿನಲ್ಲಿ ಈ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ವ್ಯವಸ್ಥೆ ಕೆಲ ತಿಂಗಳುಗಳಿಂದ ಮಾಡುತ್ತಿದ್ದು ಭಾನುವಾರ ಬೆಳಿಗ್ಗೆಯೂ ಆ ಓಮ್ನಿ ಕಾರು ಕಾರು ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಬಳಿ ಬರುವುದಾಗಿ ಅದೇ ತಾಂಡಾದ ಇನ್ನೊಬ್ಬ ಸ್ನೇಹಿತನ ಬಳಿ ಹೇಳಿದ್ದಲ್ಲದೇ ಆ ಮೊದಲೇ ತನ್ನ ಮಡದಿಯೊಂದಿಗೆ ರೀಕ್ಷಾದಲ್ಲಿ ಆ ಪ್ರೇಯರ್ ನಡೆಯುವ ಮನೆಗೆ ತೆರಳುತ್ತಾನೆ. ಇದೆಲ್ಲವೂ ಗಮನಿಸುತ್ತಿದ್ದ ಸ್ಥಳಿಯರು ಆ ಓಮ್ನಿ ಬರುತ್ತಿರುವುದು ಗಮನಿಸಿ ಪೊಲೀಸರಿಗೆ ಸುದ್ದಿ ನೀಡಿದ್ದು ಕುಂದಾಪುರ ಶಾಸ್ತ್ರೀ ವ್ರತ್ತ ಸಮೀಪ ಓಮ್ನಿ ಕಾರನ್ನು ಹಾಗೂ ಅದರಲ್ಲಿದ್ದವರನ್ನು ಠಾಣೆಗೆ ಕರೆತರಲಾಯಿತು. ಇದೇ ವೇಳೆ ಕೋಡಿ ಆಸುಪಾಸಿನ ಮನೆಯಲ್ಲಿಯೂ ಇದೇ ವಲಸೆ ಕಾರ್ಮಿಕರು ಪ್ರೇಯರ್ ಮಾಡುತ್ತಿರುವ ಬಗ್ಗೆ ಸ್ಥಳಿಯರು ಪೊಲೀಸರ ಸಮಕ್ಷಮ ತೆರಳಿದ್ದಾರೆ.

ಯಾವುದೇ ಧ್ವನಿವರ್ಧಕದ ಪರವಾನಿಗೆಯಿಲ್ಲದೇ ಮನೆಯೊಂದರಲ್ಲಿ ಧರ್ಮವೊಂದರ ಕುರಿತಾದ ‘ಪ್ರೇಯರ್’ ನಡೆಸುತ್ತಿದ್ದು ಈ ವೇಳೆ ಇದೇ ಪ್ರೇಯರಿನಲ್ಲಿ ವಲಸೆ ಕಾರ್ಮಿಕರು ಭಾಗಿಯಾಗಿದ್ದರು. ಧ್ವನಿವರ್ಧಕ ಉಪಯೋಗದ ಪರವಾನಿಗೆ ಕುರಿತು ಪೊಲೀಸರು ಪ್ರಶ್ನಿಸುತ್ತಿರುವಾಗ ಪ್ರೇಯರ್ ನಡೆಸುತ್ತಿದ್ದ ಕೆಲವರು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿ ಸಮರ್ಥನೆಗಿಳಿದಿದ್ದಾರೆ ಎನ್ನಲಾಗಿದೆ. ಈ ನಡುವೆ ಸ್ಥಳಕ್ಕೆ ಆಗಮಿಸಿದ ಕುಂದಾಪುರ ವ್ರತ್ತನಿರೀಕ್ಷಕ ದಿವಾಕರ್ ಪಿ.ಎಂ. ಎಲ್ಲರನ್ನೂ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಹಣದ ಆಮಿಷಕ್ಕೆ ಒಳಗಾಗಿ ಪ್ರೇಯರ್ ಮಾಡೋಕೆ ಹೋಗಿಲ್ಲ ಎಂದು ವಲಸೆ ಕಾರ್ಮಿಕರು ಹೇಳಿಕೆ ನೀಡಿದ್ದರೆನ್ನಲಾಗಿದೆ.

ಅಷ್ಟಕ್ಕೂ ಯಾವುದೋ ಒಂದು ಪ್ರೇಯರ್ ಮಾಡಿದ್ರೇ ಈ ಖಾಯಿಲೆ ಗುಣವಾಗುತ್ತಾ ಕೇಳಿದ್ರೇ ಎಲ್ಲಾ ದೇವರು ಮಾಡೊದು ನಮ್ಮಲ್ಲೇನು ಇಲ್ಲ ಅಂತಾರೇ ಇದೇ ಪ್ರೇಯರ್ ನಡೆಸುತ್ತಿರುವ ಮಂದಿ. ಎಲ್ಲವೂ ಪ್ರೇಯರ್ ಮಾಡೊದ್ರಿಂದ ಗುಣವಾಗೋದಾದ್ರೇ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಿಗೆ ಹೋಗೋರಿಲ್ಲವೇನೋ ಎಂಬ ಸಂಶಯದ ನಡುವೆಯೇ ಇದು ಖಾಯಿಲೆ ಗುಣಪಡಿಸುವ ಪ್ರೇಯರಾಗಿದೆಯೋ ಅಥವಾ ಧರ್ಮ ಪ್ರಚಾರವೋ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬಂದಿದೆ.

Write A Comment