ಕರ್ನಾಟಕ

ಶೃಂಗೇರಿ ಮಠದಲ್ಲಿ ಚಂಡಿಕಾ ಹೋಮ

Pinterest LinkedIn Tumblr

sriಬೇಲೂರು, ಅ.೨೨-ಶ್ರೀಶಾರದಾ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ  ಪಟ್ಟಣದ ಶೃಂಗೇರಿ ಮಠದಲ್ಲಿ ಚಂಡಿಕಾ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.   ಆಯಸ್ಸು, ಆಭಿವೃದ್ದಿ, ಅಪಮೃತ್ಯು ಪರಿಹಾರ, ಸರ್ವಶತ್ರು ನಾಶ ಮತ್ತು ಸರ್ವ ಸಿದ್ದಿಗಾಗಿ ಚಂಡಿಕಾ ಹೋಮವನ್ನು ನಡೆಸಲಾಯಿತು.

ಬೆಳಿಗ್ಗೆ ಶ್ರೀಶಾರಾದಾಂಬೆಯ ಮೂರ್ತಿಗೆ ವಿವಿದ ಪುಷ್ಪಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಶರನ್ನವರಾತ್ರಿಯ ಹಿನ್ನಲೆಯಲ್ಲಿ ದೇವಿಗೆ ಪ್ರತಿನಿತ್ಯ ವಿವಿದ ಬಗೆಯ ಅಲಂಕಾರವನ್ನು ಮಾಡಲಾಗುತ್ತಿದೆ.

ಶ್ರೀಗಾಯತ್ರಿ ಭಜನಾ ಮಂಡಳಿ ಸೇರಿದಂತೆ, ಹಲವು ಭಜನಾ ಮಂಡಳಿಯ ಮಹಿಳೆಯರು ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ವಿಷ್ಣು ಸಹಸ್ರ ನಾಮಾರ್ಚನೆಯನ್ನು ನೆರವೇರಿಸಿ ನಂತರ ಪ್ರಸಾದವನ್ನು ವಿತರಿಸಲಾಯಿತು.
ಆಯುಧ ಪೂಜೆಯ ಅಂಗವಾಗಿ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗದೊಂದಿಗೆ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಪೂರ್ಣಗೊಳ್ಳಲಿದೆ ಎಂದು ವೇ.ಬ್ರಹ್ಮ ಕೆ.ಆರ್ ಮಂಜುನಾಥ್ ತಿಳಿಸಿದರು.

Write A Comment