ಮಂಗಳೂರು : ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಬಳ್ಕೂರು ಕೃಷ್ಣಯಾಜಿಯವರಿಗೆ ಕಲ್ಕೂರ ಯಕ್ಷಸಿರಿ ಪ್ರಶಸ್ತಿಯನ್ನು ತಾ. ಅಕ್ಟೋಬರ್ 23, ವಿಜಯದಶಮಿಯಂದು ಶುಕ್ರವಾರ ಸಂಜೆ 5ಕ್ಕೆ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ನೀಡಿ ಗೌರವಿಸಲಾಗುವುದು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಕುಂಬ್ಳೆ ಸುಂದರರಾವ್ ಪ್ರಶಸ್ತಿ ಪ್ರದಾನ ಮಾಡಲಿರುವರು.
ಕರ್ಣಾಟಕ ಬ್ಯಾಂಕಿನ ನಿವೃತ್ತ ಹಿರಿಯ ಮಹಾಪ್ರಬಂಧಕರಾ ಜಯರಾಮ ಹಂದೆ, ಡಾ. ದೇವರಾಜ್ ಕೆ., ಜನಾರ್ದನ ಹಂದೆ, ಪೊಳಲಿ ನಿತ್ಯಾನಂದ ಕಾರಂತ, ಜಿ.ಕೆ. ಭಟ್ ಸೆರಾಜೆ, ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ಮೊದಲಾದವರು ಉಪಸ್ಥಿತರಿರುವರು.
ಕೀರ್ತಿಶೇಷ ಯಕ್ಷಕಲಾರಾಧಕರ ಸಂಸ್ಮರಣಾ ಕಾರ್‍ಯಕ್ರಮವು ಸಭಾ ಕಾರ್ಯಕ್ರಮದಲ್ಲಿ ಸಂಯೋಜಿಸಲಾಗಿದೆ.
ಶ್ರೀ ಯಾಜಿ ಯಕ್ಷಮಿತ್ರಮಂಡಳಿ ಕುಮುಟ ಇವರಿಂದ ಚಂದ್ರಹಾಸ ಯಕ್ಷಗಾನ ಪ್ರಸಂಗವು ಪ್ರದರ್ಶಿಸ ಲ್ಪಡುವುದು. ಶ್ರೀ ಯಾಜಿಯವರೊಂದಿಗೆ ಶಶಿಕಾಂತ್ ಶೆಟ್ಟಿ, ಪ್ರಸನ್ನ ಶೆಟ್ಟಿಗಾರ್, ರಾಮಕೃಷ್ಣ ಹೆಗಡೆ ರಮೇಶ್ ಭಂಡಾರಿ, ರಾಜೇಶ್, ನಾಗರಾಜ, ನರಸಿಂಹ, ಪರಮೇಶ್ವರ ಭಂಡಾರಿ, ಪುರಂದರ, ಷಣ್ಮುಖ ಮೊದಲಾದ ಸಹಕಲಾವಿದರು ಅಭಿನಯಿಸಲಿರುವರು.
