ಕನ್ನಡ ವಾರ್ತೆಗಳು

ಅಧಿಕೃತ ದಾಖಲೆ ಇಲ್ಲದೆ ಅಕ್ರಮ ಮರ ಸಾಗಟ: ವಾಹನ ಹಾಗೂ ಸೊತ್ತು ವಶ.

Pinterest LinkedIn Tumblr

Wood_seltter

ಮಂಗಳೂರು,ಅ.21:   ಮಂಗಳೂರು ತಾಲೂಕು ಸೂರಿಂಜೆ ಗ್ರಾಮದ ಶಿಬರೂರು ಕಾಟಿಪಳ್ಳ ರಸ್ತೆಯ ಪೆಡ್ಡಿಯಂಗಡಿ ಎಂಬಲ್ಲಿ ಅ.20 ರಂದು ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ವಿವಿಧ ಜಾತಿಯ ಜಾತಿಯ 9 =2.490 ಘ.ಮೀ. ಮರದ ದಿಮ್ಮಿಗಳನ್ನು ಮತ್ತು56 ಕಂಬಗಳನ್ನು ಲಾರಿ ನಂಬ್ರ ಕೆ‌ಎ13ಸಿ-5997ರಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸೊತ್ತುಗಳನ್ನು ಸರಕಾರ ಪರವಾಗಿ ಅಮಾನತು ಪಡಿಸಿ ಲಾರಿ ಚಾಲಕ ಜಯರಾಮ್ ಶೆಟ್ಟಿ ಇವರನ್ನು ಬಂಧಿಸಿ ಮುಚ್ಚಳಿಕೆ ಪತ್ರದ ಮೂಲಕ ಬಿಡುಗಡೆಗೊಳಿಸಲಾಗಿದೆ.

ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ, ಪಿ. ಶ್ರೀಧರ, ಮತ್ತು ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಯವರಾದ ಅಶ್ವಿತ್ ಕೆ. ಪ್ರೀತಮ್, ರವಿ ಕುಮಾರ್ ಅರಣ್ಯ ರಕ್ಷಕರಾದ ಜಿತೇಶ್ , ಕೃಷ್ಣ ಜೋಗಿ , ಅರಣ್ಯ ವೀಕ್ಷಕರಾದ ಪ್ರಿನ್ಸ್ ಹಾಗೂ ಚಾಲಕ ಸೂರಜ್ ಸುವರ್ಣ ಇವರು ಸಹಕರಿಸಿದರು.

ಪ್ರಕರಣದ ತನಿಖೆಯನ್ನು ಕೆ.ಟಿ. ಹನುಮಂತಪ್ಪ, ಭಾ‌ಅಸೇ, ಉಪ ಅರಣ್ಯ ಸಂರಕ್ಷಣಾಧಿಕಾರಿ , ಮಂಗಳೂರು ವಿಭಾಗ, ಮಂಗಳೂರು ಇವರ ನಿರ್ದೇಶನದಂತೆ ಎಸ್.ಅಬ್ಬಾಸ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು, ಮಂಗಳೂರು ಇವರು ನಡೆಸುತ್ತಿದ್ದಾರೆ ಪ್ರಕಟನೆ ತಿಳಿಸಿದೆ.

Write A Comment