ಮುದ್ದೇಬಿಹಾಳ: ಚಲನಚಿತ್ರ ನಾಯಕನಟ ದುನಿಯಾ ವಿಜಯ(ವಿಜಯಕುಮಾರ) ವಿರುದ್ಧ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯದ ಕಿರಿಯ ಶ್ರೇಣಿ ಎನ್.ಕೆ. ಸಾಲ ಮಂಟಪಿ ಜಾಮೀನು ರಹಿತ ವಾರಂಟ್ ಹೊರಡಿಸಿ ಸೋಮವಾರ ಆದೇಶಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ಸಂದರ್ಭ ಜೆಡಿಎಸ್ ಅಭ್ಯರ್ಥಿ ಕೆ. ಶಿವರಾಮು ಪರ ಪ್ರಚಾರಕ್ಕೆ ಬಂದಿದ್ದ ದುನಿಯಾ ವಿಜಯ ಹಾಗೂ ಅಭ್ಯರ್ಥಿ ಕೆ. ಶಿವರಾಮು ನೀತಿ ಸಂಹಿತೆ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಇಲ್ಲಿ ಜೆಎಂಎಫ್ ಸಿ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು.
ನಿರಂತರ ಗೈರು ಹಾಜರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಈ ಆದೇಶ ಹೊರಡಿಸಿ ವಿಚಾರಣೆಯನ್ನು ನ.23 ರಂದು ನಿಗದಿಪಡಿಸಿದ್ದಾರೆ.
