ಸ್ಯಾಂಟಿಯಾಗೊ, ಅ.19: ಮನೆಯಲ್ಲಿ ಸಹೋದರರಿಬ್ಬರು ಕಳ್ಳ-ಪೊಲೀಸ್ ಆಟವಾಡುತ್ತಿದ್ದ ವೇಳೆ ಆರು ವರ್ಷದ ಅಣ್ಣ ತನ್ನ ಮೂರು ವರ್ಷದ ಸಹೋದರನಿಗೆ ಶೂಟೌಟ್ ಮಾಡಿ ಹತ್ಯೆ ಮಾಡಿರುವ ಘಟನೆ ಚಿಕಾಗೊದ ಸ್ಯಾಂಟಿಯಾಗೊ ನಗರದಲ್ಲಿ ನಡೆದಿದೆ.
ಮನೆಯಲ್ಲಿ ಸಹೋದರನ ಜತೆ 6 ವರ್ಷದ ಅಣ್ಣ ಆಟವಾಡುತ್ತಿದ್ದ. ಆ ವೇಳೆ ಫ್ರಿಜ್ ಮೇಲಿಂದ ಬಂದೂಕು ತೆಗೆದುಕೊಂಡು ತಕ್ಷಣ ಗುಂಡು ಹಾರಿಸಿದ್ದಾನೆ. ಅದು ಆತನ ಸಹೋದರನಿಗೆ ತಗುಲಿದೆ. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮೈಕಲ್ ಹಾಗೂ 6 ವರ್ಷದ ಬಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಮೈಕಲ್ ಸರಗಳ್ಳರ ಗುಂಪಿನ ಸದಸ್ಯನಾಗಿದ್ದು, ಆತ ರಕ್ಷಣೆಗಾಗಿ ಬಂದೂಕು ಇಟ್ಟುಕೊಂಡಿದ್ದಾಗಿ ತಿಳಿದುಬಂದಿದೆ.
