ರಾಷ್ಟ್ರೀಯ

ಬಿಜೆಪಿಯ ಮೇಲೆ ಮುನಿಸಿಲ್ಲ: ಶತ್ರುಘ್ನ ಸಿನ್ಹಾ

Pinterest LinkedIn Tumblr

Shatrughan-Sinha

ಕೊಚ್ಚಿ, ಅ. 19: ತನ್ನ ಇತ್ತೀಚಿನ ಅನೇಕ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸಿದ್ದ ಮಾಜಿ ನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ತಾನು ಪಕ್ಷದ ಮೇಲೆ ಸಿಟ್ಟುಗೊಂಡಿದ್ದೇನೆಂಬುದನ್ನು ನಿರಾಕರಿಸಿದ್ದಾರೆ. ಆಹ್ವಾನ ಬಂದ ಬಿಜೆಪಿ ಸಭೆಗಳಲ್ಲಿ ಮಾತ್ರ ತಾನು ಭಾಗವಹಿಸುತ್ತೇನೆಂದು ಅವರು ಸ್ಪಷ್ಟಪಡಿಸಿದ್ದಾರೆ.ಬಿಜೆಪಿಗೆ ಶುಭ ಹಾರೈಕೆಗಳು ಹಾಗೂ ಸದ್ಭಾವನೆಯೊಂದಿಗೆ ತಾನು ಇನ್ನಷ್ಟು ವಿವಾದ ಸೃಷ್ಟಿಸದಿರಲು ಅಥವಾ ಪರಿಸ್ಥಿತಿಯನ್ನು ಇನ್ನಷ್ಟು ಅಸ್ತವ್ಯಸ್ತಗೊಳಿಸದಿರಲು ನಿರ್ಧರಿಸಿದ್ದೇನೆಂದು ಸಿನ್ಹಾ ಹೇಳಿದ್ದಾರೆ.

ರಾಜಕೀಯವಾಗಿ ಮಹತ್ವದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಚಾರದಲ್ಲೇಕೆ ಭಾಗವಹಿಸಲಿಲ್ಲವೆಂಬ ಪತ್ರಕರ್ತರ ಪ್ರಶ್ನೆಗೆ ಈ ರೀತಿ ಉತ್ತರಿಸಿದ ಶತ್ರುಘ್ನ ಸಿನ್ಹಾ, ಅದಕ್ಕಾಗಿ ತಾನು ಪ್ರಚಾರದಿಂದ ತಪ್ಪಿಸಿಕೊಂಡಿದ್ದೇನೆ. ಆಹ್ವಾನ ನೀಡಿದರಷ್ಟೇ ತಾನು ಭಾಗವಹಿಸುತ್ತೇನೆ. ಇದು ತನ್ನ ದೃಢ ನಂಬಿಕೆಯಾಗಿದೆ ಎಂದರು.

ಇದು ತಾನು ‘ದೃಶ್ಯದಿಂದ’ ದೂರವುಳಿಯಲು ಕಾರಣವಾಗಿದೆ. ತಾನು ತನ್ನ ಸಂಸದೀಯ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆಂದು ಅವರು ತಿಳಿಸಿದರು.ತಾನಿಲ್ಲಿಗೆ ಬಂದಿದ್ದೇನೆ. ಆದಾಗ್ಯೂ, ತನಗೆ ಕೆಟ್ಟ ಭಾವನೆಯಿಲ್ಲ. ತಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದರೆ ಇನ್ನಷ್ಟು ಉತ್ತಮ ಅಥವಾ ತಮ್ಮ ನಿರೀಕ್ಷೆಯಂತೆ ಸಾಧನೆ ಮಾಡಬಹುದಿತ್ತೆಂದು ತಾನು ಭಾವಿಸುತ್ತಿದ್ದೇನೆ. ಕೆಲವರು ಅತಿ ಮಹತ್ವಾಕಾಂಕ್ಷೆಗಳಾದರಂದು ಸಿನ್ಹಾ ಹೇಳಿದರು.

ಬಿಹಾರದಲ್ಲಿ ಯಾರು ಗೆಲ್ಲುತ್ತಾರೆ? ಎಂಬ ಪ್ರಶ್ನೆಗೆ, ಅದನ್ನು ಜನರು ನಿರ್ಧರಿಸುತ್ತಾರೆಂದು ಅವರುತ್ತರಿಸಿದರು. ತಾವು ಬಿಹಾರವನ್ನು ವಶಪಡಿಸಿ ಕೊಳ್ಳುತ್ತೇವೆಂಬ ಆಶಾಭಾವನೆ, ಹಾರೈಕೆ ಹಾಗೂ ಪ್ರಾರ್ಥನೆ ತನ್ನದಾಗಿದೆ. ಬಿಜೆಪಿಯು ಬಿಹಾರವನ್ನು ಪ್ರಗತಿ, ಶಾಂತಿ, ಸಮೃದ್ಧಿ ಇನ್ನಷ್ಟು ಬೆಳವಣಿಗೆ ಹಾಗೂ ವೈಭವದ ಹಾದಿಯಲ್ಲಿ ಒಯ್ಯಲಿದೆ. ಆದರೆ, ಜ್ಯೋತಿಷಿಯಲ್ಲವಾದ ಕಾರಣ, ತಾನು ಈಗಲೇ ಏನೂ ಹೇಳಲಾರೆನೆಂದು ಜನಪ್ರಿಯ ನಟ ಹೇಳಿದರು.ತಾನು ಕ್ಷೇತ್ರದ ವಾಸ್ತವವನ್ನೂ ಗಮನಿಸಿಲ್ಲ. ಆದರೆ ತನ್ನ ಪಕ್ಷಕ್ಕೆ ತನ್ನ ಉತ್ತಮ ಹಾರೈಕೆಯಿದೆ. ಒಟ್ಟಾರೆ ಅತ್ಯುತ್ತಮ ವ್ಯಕ್ತಿ ಹಾಗೂ ಅತ್ಯುತ್ತಮ ಪಕ್ಷ ಗೆಲ್ಲಲಿ ಎಂದವರು ಆಶಿಸಿದರು.

Write A Comment