ಕನ್ನಡ ವಾರ್ತೆಗಳು

ಮಿಜಾರು ಜೀವನಂಧರ್ ಜೈನ್ ನಿಧನಕ್ಕೆ ಕಾರ್ನಿಕ್ ಸಂತಾಪ.

Pinterest LinkedIn Tumblr

ಮೂಡಬಿದ್ರೆ,ಅ.15  : ಪ್ರಗತಿಪರ ಕೃಷಿಕ, ಸಮಾಜ ಸೇವಕ, ಸಮಾಜ ಸುಧಾರಕ ಹಾಗೂ ಹಿರಿಯರೂ ಆಗಿದ್ದ ಮಿಜಾರು ಶ್ರೀ ಜೀವನಂಧರ್ ಜೈನ್‌ರವರು ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್ ಅವರು ಸಂತಾಪ ಸೂಚಿಸಿದ್ದಾರೆ.

ಶ್ರೀಯುತ್ತರ ನಿಧನದ ಸುದ್ಧಿ ಪರಿಸರದ ಎಲ್ಲರಿಗೂ ದು:ಖವನ್ನು ತಂದಿದೆ. ಸಮಾಜಕ್ಕೆ ಅವರು ನೀಡಿದ ಸೇವೆಯನ್ನು ಹಾಗೂ ಅವರ ಆದರ್ಶವನ್ನು ಸ್ಮರಿಸುತ್ತಾ ಶ್ರೀಯುತರ ನಿಧನದ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೂ ಹಾಗೂ ಅವರ ಅಭಿಮಾನಿಗಳಿಗೂ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಸಂತಾಪಗಳನ್ನು ಸೂಚಿಸುವುದಾಗಿ ಕಾರ್ನಿಕ್ ತಿಳಿಸಿದ್ದಾರೆ.

Write A Comment