ಕನ್ನಡ ವಾರ್ತೆಗಳು

ರಸ್ತೆ ಅಪಘಾತ: ಪ್ರತ್ಯಕ್ಷ ಸಾಕ್ಷಿಗಳಿಗೆ ಒತ್ತಡ ಹೇರುವಂತಿಲ್ಲ – ಕೇಂದ್ರ ಸರ್ಕಾರ ಮಾರ್ಗಸೂಚಿ.

Pinterest LinkedIn Tumblr

supreme-court

ಮಂಗಳೂರು, ಅ.15 :  ರಸ್ತೆ ಅಪಘಾತಗಳಾದಲ್ಲಿ ಅಂತಹಾ ಜಾಗದಲ್ಲಿ ಇರುವವರು ಅಪಘಾತಕ್ಕೊಳಗಾದವರನ್ನು ರಕ್ಷಿಸಲು ಮುಂದೆ ಬರುವ ನಾಗರೀಕರ ಸುರಕ್ಷತೆಗಾಗಿ ಸವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನನ್ವಯ ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ತನ್ನ ಅಧಿಸೂಚನೆಯಲ್ಲಿ ಹೊರಡಿಸಿದೆ.

ಮಾರ್ಗಬದಿಯಲ್ಲಿರುವ ನಾಗರೀಕರು ಅಂದರೆ ಪ್ರತ್ಯಕ್ಷ ಸಾಕ್ಷಿಗಳು ತಮ್ಮ ಎದುರಿನಲ್ಲಿ ರಸ್ತೆ ಅಪಘಾತಕ್ಕೊಳಗಾದವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಿ ತಮ್ಮ ವಿಳಾಸವನ್ನಷ್ಟೇ ಸಂಬಂಧಿಸಿದವರಿಗೆ ನೀಡಿ ತೆರಳಬಹುದಾಗಿದ್ದು ಪೋಲೀಸರು ಅಂತಹಾ ವ್ಯಕ್ತಿಗಳಿಗೆ ಬೇರೆ ಯಾವುದೇ ಪ್ರಶ್ನೆಗಳನ್ನು ಕೇಳಬಾರದು. ಇಂತಹಾ ದಾರಿ ಹೋಕರು ಅಪಘಾತದ ಗಾಯಾಳುಗಳಿಗೆ ಸಹಾಯ ಹಸ್ತ ನೀಡುವುದನ್ನು ಪ್ರೋತ್ಸಾಹಿಸಲು ಅವರುಗಳಿಗೆ ಪ್ರಶಸ್ತಿ ಬಹುಮಾನಗಳನ್ನು ಸಂಬಂದಿಸಿದ ಪ್ರಾಧಿಕಾರಿಗಳು ನೀಡಬೇಕು. ಇಂತವರ ಮೇಲೆ ಯಾವುದೇ ರೀತಿಯ ಸಿವಿಲ್ ಯಾ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವಂತಿಲ್ಲ.

ಯಾರೇ ದಾರಿ ಹೋಕರು ತಮ್ಮ ಎದುರಿನಲ್ಲಿ ನಡೆದ ಅಪಘಾತದ ಬಗ್ಗೆ ಪೋಲೀಸರಿಗಾಗಲಿ ಅಥವಾ ತುರ್ತು ಸೇವೆಗಳಿಗಾಗಿ ಕರೆ ಮಾಡಿದಾಗ ಅಂಥಹಾ ವ್ಯಕ್ತಿಯ ಪರಿಚಯವನ್ನು ಕಡ್ಡಾಯವಾಗಿ ನೀಡುವಂತೆ ಒತ್ತಾಯ ಪಡಿಸುವಂತಿಲ್ಲ. ಆದರೆ ಅಂಥಹಾ ವ್ಯಕ್ತಿ ತನ್ನ ವಿವರಗಳನ್ನು ನೀಡುವುದು ಐಚ್ಛಿಕವಾಗಿರುವುದು. ಒಂದುವೇಳೆ ಯಾರಾದರೂ ಸರ್ಕಾರಿ ಉದ್ಯೋಗಿಗಳು ಇಂತಹಾ ವ್ಯಕ್ತಿಗಳನ್ನು ಸ್ವವಿವರಗಳನ್ನು ನೀಡುವಂತೆ ಒತ್ತಾಯಿಸಿದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಅಥವಾ ಇಲಾಖಾ ವಿಚಾರಣೆಗೆ ಒಳಪಡಿಸಲಾಗುವುದು.

ರಸ್ತೆ ಅಪಘಾತಗಳ ಬಗ್ಗೆ ಮಾಹಿತಿ ಒದಗಿಸುವ ಪ್ರತ್ಯಕ್ಷ ಸಾಕ್ಷಿಗಳನ್ನು ಅವರ ಹೇಳಿಕೆ ಪಡೆಯಲು ಸಂಬಂಧಿಸಿದ ಪ್ರಾಧಿಕಾರಗಳು ವ್ಯಕ್ತಿಗೆ ಯಾವುದೇ ರೀತಿಯ ಮನಸಿಕ ಅಥವಾ ದೈಹಿಕ ಹಿಂಸೆ ನೀಡದೆ ಒಂದು ಸಲ ಪಡೆಯಬಹುದಾಗಿದೆ.

ಈ ದಿಸೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೆಲವು ಮಾರ್ಗಸೂಚಿಗಳನ್ನು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳ ಆಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಗಳನ್ನು ಯಾವುದೇ ಕಾರಣಕ್ಕೂ ತಡೆಯಿಡಿಯದಂತೆ ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವಂತೆ ಸೂಚಿಸಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ, ಅಪಘಾತಕ್ಕೊಳಗಾದವರನ್ನು ನೋಂದಣಿ ಮಾಡಿಕೊಳ್ಳುವುದು ಪ್ರವೇಶ ಶುಲ್ಕ ಕಟ್ಟುವಂತೆ ಪ್ರತ್ಯಕ್ಷ ಸಾಕ್ಷಿಗಳನ್ನು ಪೀಡಿಸುವ ವೈದ್ಯರ ನಡೆಯನ್ನು ವೃತ್ತಿ ದುರ್ನಡತೆ ಎಂದು ಪರಿಗಣಿಸಿ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಅದೇ ರೀತಿ ಎಲ್ಲಾ ಖಾಸಗೀ ಹಾಗೂ ಸಕಾರಿ ಆಸ್ಪತ್ರೆ ಆವರಣಗಳಲ್ಲಿ ಹಿಂದಿ ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಯಾರೇ ಅಪಘಾತಗಳ ಪ್ರತ್ಯಕ್ಷ ಸಾಕ್ಷಿಗಳು ಅಪಘಾತಕ್ಕೊಳಗದವರನ್ನು ಆಸ್ಪತ್ರೆಗೆ ಸೇರಿದಲು ಕಡ್ಡಾಯವಾಗಿ ಹಣ ಪಾವತಿಸುವಂತೆ ಒತ್ತಾಯ ಪಡಿಸುವುದಿಲ್ಲ ಎಂಬುದಾಗಿ ಪಲಕಗಳನ್ನು ಅಳವಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

Write A Comment