ಕರ್ನಾಟಕ

ಅ.14ರಂದು ಡಿಕೆಎಸ್‌ಸಿ ಶಾರ್ಜಾ ಘಟಕದಿಂದ ಆಧ್ಯಾತ್ಮಿಕ ಮಜ್ಲೀಸ್ ಹಾಗೂ ಸನ್ಮಾನ ಸಮಾರಂಭ

Pinterest LinkedIn Tumblr

lathif

ದುಬೈ, ಅ.13: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ರಾಷ್ಟ್ರೀಯ ಸಮಿತಿ ಯುಎಇ ಇದರ ಆಶ್ರಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಮ್ಮಿಕೊಳ್ಳುತ್ತಾ ಬಂದಿರುವ ಜಲಾಲಿಯ್ಯ ಮಜ್ಲೀಸ್ ಇದರ ವಾರ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಾಯ್ನಡಿನಿಂದ ಬಂದಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಸೆಂಟ್ರಲ್ ಕಮಿಟಿ ಹಾಗೂ ಮರ್ಕಝ್ ತಅಲಿಮುಲ್ ಇಹ್ಸಾನ್ ಮೂಳೂರು ಇದರ ಅಧ್ಯಕ್ಷರೂ ಆಗಿರುವ ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್‌ರವರ ನೇತೃತ್ವದಲ್ಲಿ ಶಾರ್ಜಾ ರೋಲಾದ ಕೆಎಫ್‌ಸಿ ಮುಂಭಾಗದಲ್ಲಿರುವ ಇಂಟರ್‌ನ್ಯಾಷನಲ್ ಎಕ್ಸ್‌ಚೇಂಜ್ ಕಟ್ಟಡದ ಒಂದನೆ ಮಹಡಿಯಲ್ಲಿರುವ ಲತೀಫ್ ಮುಲ್ಕಿಯವರ ನಿವಾಸದಲ್ಲಿ ಅಕ್ಟೋಬರ್ 14ರಂದು ರಾತ್ರಿ 9 ಗಂಟೆಗೆ ಆಧ್ಯಾತ್ಮಿಕ ಮಜ್ಲೀಸ್ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರಮುಖ ಸಾದತುಗಳು, ಉಲಮಾ-ಉಮರಾಗಳು ಭಾಗವಹಿಸಲಿದ್ದಾರೆ. ಈ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಶಾರ್ಜಾ ಘಟಕ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.-0506535018, 0507717262.

Write A Comment