ಉಡುಪಿ: ಪಾನಮತ್ತರಾದ ತಂದೆ ಕ್ಷುಲ್ಲಕ ಕಾರಣಕ್ಕೆ ತನ್ನ ಪುತ್ರನ ಮೇಲೆ ಹಲ್ಲೆ ನಡೆಸಿದ ಘಟನೆ ಬ್ರಹ್ಮಾವರ ಹೊಸೂರು ಗ್ರಾಮದ ಕರ್ಜೆ ಎಂಬಲ್ಲಿ ನಡೆದಿದೆ.
ತನ್ನ ತಂದೆ ಭೋಜ ಕುಲಾಲ್ ಹಲ್ಲೆ ನಡೆಸಿದ್ದಾರೆಂದು ಪುತ್ರ ಸಂತೋಷ್ ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ.
ವಿಪರೀತ ಮದ್ಯ ಸೇವಿಸಿದ್ದ ಭೋಜ ಕುಲಾಲ್ ಮೀನು ಚೀಲವನ್ನು ಪತ್ನಿಗೆ (ಸಂತೋಷ್ ಅವರ ತಾಯಿ) ನೀಡಿ ಸಾರು ಮಾಡಲು ಹೇಳಿದ್ದಾರೆ. ಇದು ವಿಳಂಭವಾದ ಕಾರಣ ಸಿಟ್ಟಿಗೆದ್ದ ಭೋಜ ಅವರು ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದು ಇದನ್ನು ತಪ್ಪಿಸಲು ಹೋದ ಸಂತೋಷ್ ಅವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
