ಕರ್ನಾಟಕ

ಪೊಲೀಸ್ ಠಾಣೆಯ ಅಂಗಳದಲ್ಲಿ ಪ್ರೇಮಿಗಳ ಮರು ವಿವಾಹ

Pinterest LinkedIn Tumblr

marriageಹುಳಿಯಾರು, ಅ.11- ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಮುಂದೆ ಪ್ರೇಮಿಗಳು ಮರು ಮದುವೆಯಾದ ಪ್ರಸಂಗ ಹುಳಿಯಾರು ಪೊಲೀಸ್ ಠಾಣೆಯ ಆವರಣದಲ್ಲಿನ ಬಸವಣ್ಣನ ದೇವಾಲಯದ ಮುಂದೆ ಜರುಗಿತು.

ಹುಳಿಯಾರು ವಾಸಿ ಜೋಗಿ ಸಮುದಾಯದ ರೇವಣ್ಣ ಎಂಬುವರ ಮಗಳು ಮಾಲಾ (23) ಹಾಗೂ ಹಂದನಕೆರೆ ಹೋಬಳಿ ಲಕ್ಷ್ಮಿಪುರ ವಾಸಿ ಭಜಂತ್ರಿ ಸಮುದಾಯದ ಚಿಕ್ಕಣ್ಣ ಎಂಬುವರ ಮಗ ಶಿವರಾಜ್ (24) ಠಾಣೆಯ ಬಳಿ ದೇವಸ್ಥಾನದಲ್ಲಿ ಮದುವೆಯಾದ ಯುವ ಪ್ರೇಮಿಗಳಾಗಿದ್ದಾರೆ.

ಈ ಪ್ರೇಮಿಗಳು ಕಳೆದ ಒಂದು ವಾರದ ಹಿಂದೆ  ಮನೆ ಬಿಟ್ಟು ಹೋಗಿ ವಿವಿಧ ಊರುಗಳನ್ನು ಸುತ್ತಾಡಿ ನಂತರ ಧರ್ಮಸ್ಥಳದಲ್ಲಿ ವಿವಾಹವಾಗಿ ಬಂದಿದ್ದೇವೆ  ನಮ್ಮನ್ನ ಬದಕಲು ಬಿಡಿ ಎಂದು ಹುಳಿಯಾರು ಪೊಲೀಸ್ ಠಾಣೆಯಲ್ಲಿ ತಮ್ಮ ಪೋಷಕರ ಹಾಗೂ ವಿವಿಧ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಯುವಕನ ಪೋಷಕರು ಒಪ್ಪಿಕೊಂಡಿದ್ದಾರೆ. ಆದರೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದರು.

ಯುವತಿ ಮಾತ್ರ ನಾನು ಮನೆಗೆ ಬರುವುದಿಲ್ಲ, ಮದುವೆಯಾಗಿರುವ ನನ್ನ ಗಂಡನ ಮೆನೆಗೆ ಹೋಗುತ್ತೇನೆಂದು ಮನವಿ ಮಾಡಿಕೊಡ್ಡಿದ್ದಾರೆ. ನಂತರ ಪೊಲೀಸ್ ಠಾಣೆಯ ಆವರಣದಲ್ಲಿರುವ ಬಸವಣ್ಣ ದೇವಾಲಯದ ಮುಂದೆ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಮುಖ್ಮದಲ್ಲಿ ಪ್ರೇಮಿಗಳಿಬ್ಬರು ಪರಸ್ಪರ ಹೂವಿನ ಹಾರವನ್ನು ಬದಲಾಯಿಸಿಕೊಳ್ಳುವ ಮೂಲಕ ಮರು ವಿವಾಹವಾಗಿದ್ದಾರೆ. ಈ ವೇಳೆ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್, ಸದಸ್ಯ ರಾಘವೇಂದ್ರ, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಹಾಗೂ ಯುವಕನ ತಂದೆ ಚಿಕ್ಕಣ್ಣ ಮತ್ತು ಸಂಬಂಧಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

Write A Comment