ರಾಷ್ಟ್ರೀಯ

ಮೇಲೇರಿದ ಕಾರು, ಜಾರಿದ ಬೈಕ್

Pinterest LinkedIn Tumblr

car-bikeನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 1,69,590 ಕಾರುಗಳು ಮಾರಾಟ ಕಂಡಿವೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾಗಿದ್ದ 1,54,898 ಕಾರುಗಳಿಗೆ ಹೋಲಿಸಿದರೆ ಶೇ.9.48ರಷ್ಟು ಏರಿಕೆ ಕಂಡಿದೆ. ಹಾಗಿದ್ದರೂ ದ್ವಿಚಕ್ರ ವಾಹನಗಳ ಮಾರಾಟ ಶೇ.1.06ರಷ್ಟು ಇಳಿಮುಖ ಕಂಡಿದೆ.

ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ 15,53,608 ದ್ವಿಚಕ್ರ ವಾಹನ ಮಾರಾಟ ಕಂಡಿದ್ದರೆ ಈ ವರ್ಷದ ಸೆಪ್ಟೆಂಬರ್‍ನಲ್ಲಿ 15,37,137 ವಾಹನ ಮಾರಾಟವಾಗಿದೆ. ಕಾರು ಮಾರಾಟದಂತೆ ವಾಣಿಜ್ಯ ವಾಹನಗಳ ಮಾರಾಟದಲ್ಲೂ ಶೇ.12.07ರಷ್ಟು ಏರಿಕೆ ಕಂಡಿದೆ. ಒಟ್ಟಾರೆಯಾಗಿ ಎಲ್ಲ ವಾಹನಗಳ ಮಾರಾಟ ಲೆಕ್ಕ ಹಾಕಿದರೆ ಶೇ.0.45ರಷ್ಟು ಇಳಿಮುಖ ಕಂಡಿದೆ.

Write A Comment