ಕರ್ನಾಟಕ

‘ನಾನು ಗೋ ಭಕ್ಷಣಾ ಆಯೋಗದ ಅಧ್ಯಕ್ಷ ಆಗ್ತೀನಿ , ಸಿ.ಟಿ.ರವಿ ನರಭಕ್ಷಣಾ ಆಯೋಗದ ಅಧ್ಯಕ್ಷರಾಗಲಿ’..! : ಅಮೀನ್‌ಮಟ್ಟು

Pinterest LinkedIn Tumblr

aminಬೆಂಗಳೂರು, ಅ.9-ಗೋ ಭಕ್ಷಣಾ ಆಯೋಗದರಾಗಲು ತಾವು ಸಿದ್ಧವಿದ್ದು ಬಿಜೆಪಿ ಶಾಸಕ ಸಿ.ಟಿ.ರವಿ ನರಭಕ್ಷಣಾ ಬೆಂಬಲಿಗರ ಆಯೋಗದ ಅಧ್ಯಕ್ಷರಾಗಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ತಿರುಗೇಟು ನೀಡಿದ್ದಾರೆ.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಸಿ.ಟಿ.ರವಿ ಅವರು ದಿನೇಶ್ ಅಮೀನ್‌ಮಟ್ಟು ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಯಿಂದ ತೆರವುಗೊಳಿಸಿ ಗೋಭಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಿ ಎಂದು ಲೇವಡಿ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದಿನೇಶ್ ಅಮೀನ್‌ಮಟ್ಟು ಸಿ.ಟಿ.ರವಿ ಅವರ ಪ್ರಸ್ತಾವನೆಯನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ. ಗೋಭಕ್ಷಣಾ ಆಯೋಗದ ಅಧ್ಯಕ್ಷನಾಗಲು ನಾನು ಸಿದ್ಧನಿದ್ದೇನೆ.

ಕೆಲಸವಿಲ್ಲದೆ ನಿರುದ್ಯೋಗಿಯಾಗಿರುವ  ಸಿ.ಟಿ.ರವಿ ನರಭಕ್ಷಣಾ ಬೆಂಬಲಿಗರ ಆಯೋಗದ ಅಧ್ಯಕ್ಷರಾಗಲಿ ಎಂದು ವ್ಯಂಗ್ಯವಾಡಿದರು. ಸಿ.ಟಿ.ರವಿ ಅವರು ತಮ್ಮ ಪರಿವಾರವನ್ನು ಬಳಸಿಕೊಂಡು ಪ್ರಧಾನಿಗಳ ಮೇಲೆ ಪ್ರಭಾವ ಬೀರಿ ರಾಷ್ಟ್ರಮಟ್ಟದಲ್ಲಿ ನರಭಕ್ಷಣಾ ಬೆಂಬಲಿಗರ ಆಯೋಗ ರಚಿಸಿ ಅದಕ್ಕೆ ಅಧ್ಯಕ್ಷರಾಗಲಿ ಎಂದರು.

Write A Comment