ಕರ್ನಾಟಕ

ಅರಮನೆ ಮೈದಾನದಲ್ಲಿ ‘ಗ್ರಾಮ ಸ್ವರಾಜ್ಯ’ ಸಮಾವೇಶ; ದಾದ್ರಿ ಘಟನೆಗೆ ಬಿಜೆಪಿ ಕಾರಣ: ರಾಹುಲ್‌ಗಾಂಧಿ

Pinterest LinkedIn Tumblr

rahulaaಬೆಂಗಳೂರು,ಅ.9: ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಗಲಭೆಗೆ ಬಿಜೆಪಿ ಕಾರಣ. ಎಲ್ಲಿ ಚುನಾವಣೆಗಳು ನಡೆಯುತ್ತವೋ ಅಲ್ಲಿ ದೇಶದ ಜನರ ನಡುವೆ ಗಲಭೆ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾ ಗಿದ್ದ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ‘ಗ್ರಾಮ ಸ್ವರಾಜ್ಯ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ಹೇಳುತ್ತಾರೆ, ಗಲಭೆಗಳುಸಂಭವಿಸಬಾರದು ಎಂದು. ಆದರೆ, ಗಲಭೆಗಳನ್ನು ಮಾಡಿಸುತ್ತಿ ರುವವರು ಯಾರೂ ನಿಮ್ಮ ಜನರೇ ಅಲ್ಲವೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಪ್ರಧಾನಿಯ ದಾಖಲೆ ನಿಮಗೆಲ್ಲ ಗೊತ್ತೇ ಇದೆ ಎಂದು ಟೀಕಿಸಿದರು.

ದೇಶದಲ್ಲಿ ಕೋಮು ಸೌಹಾರ್ದ ಕದಡಬಾರದು. ಗಲಭೆ ಗಳು ನಡೆಯಬಾರದು ಎಂದು ಹೇಳಲು ದಾದ್ರಿ ಘಟನೆ ಸಂಭವಿ ಸಿದ ಬಳಿಕ ನಾಲ್ಕೈದು ದಿನಗಳು ಬೇಕಾಯಿತು. ಆದರೆ, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ, ಚುನಾಯಿತ ಪ್ರತಿನಿಧಿಗಳು ಸಮಾಜದಲ್ಲಿ ಕೋಮು ಸೌಹಾರ್ದ ಸ್ಥಾಪಿಸಲು, ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿ ಎಂದು ಅವರು ಕರೆ ನೀಡಿದರು. ಗಲಭೆ ಗಳಿಂದ ಯಾರ ಕಲ್ಯಾಣವೂ ಆಗುವುದಿಲ್ಲ. ದೇಶವನ್ನು ಮುನ್ನಡೆಸ ಲು ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಮುಂದುವರಿಯಬೇಕು. ಗ್ರಾಮೀಣ ಮಟ್ಟದ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಶ್ರಮಿಸ ಬೇಕು ಎಂದು ರಾಹುಲ್‌ಗಾಂಧಿ ಕರೆ ನೀಡಿದರು.

ಕಾರ್ಯಕರ್ತರ ಭಾವನೆಗಳನು್ನ ಗೌರವಿಸಿ: ರಾಹುಲ್‌ಗಾಂಧಿ
ಬೆಂಗಳೂರು,ಅ.9: ಪಕ್ಷದ ಕಾರ್ಯಕರ್ತರೇ ನಮಗೆ ಶಕ್ತಿ. ಅವರ ಭಾವನೆಗಳನ್ನು ಗೌರವಿಸಿ ಎಂದು ರಾಜ್ಯ ಸರಕಾರಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಸೂಚನೆ ನೀಡಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ವಿಶೇಷ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು, ಪಕ್ಷದ ಕಾರ್ಯಕರ್ತರಿಗೆ ಗೌರವ ನೀಡಬೇಕು ಎಂದರು.

ಸಚಿವರು, ಶಾಸಕರು, ಕಾರ್ಯಕರ್ತರ ಜೊತೆಗೂಡಿ ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು. ಗ್ರಾಮ ಪಂಚಾಯಿತಿ ಮಾದರಿಯಲ್ಲಿ, ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬರಲು ಕಾರ್ಯಕ್ರಮ ರೂಪಿಸಿ ಎಂದು ಅವರು ಸೂಚನೆ ನೀಡಿದರು.

ರಾಹುಲ್‌ಗಾಂಧಿಯನ್ನು ಆಶೀರ್ವದಿಸಿದ ಗವಿ ತಿಮ್ಮಮ್ಮ
ಬೆಂಗಳೂರು,ಅ.9: ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ದೊಡ್ಡ ಹಲದೂರು ಗ್ರಾಮ ಪಂಚಾಯತ್‌ಯ ಉಪಾಧ್ಯಕ್ಷೆ 102 ವರ್ಷದ ಗವಿ ತಿಮ್ಮಮ್ಮ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾ ಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ರನ್ನು ವೇದಿಕೆ ಮೇಲೆ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ವತಿ ಯಿಂದ ರಾಹುಲ್‌ಗಾಂಧಿಗೆ ಮೈಸೂರು ಪೇಟ ಹಾಗೂ ಖಡ್ಗ ನೀಡಿ ಸನ್ಮಾನಿಸಲಾಯಿತು.

Write A Comment