ಮನೋರಂಜನೆ

ಪೊಲೀಸರ ಬಲೆಗೆ ಬಿದ್ದ ನಟಿ ಮೋನಿಕಾ

Pinterest LinkedIn Tumblr

monikaಟಿವಿ ನಿರ್ಮಾಪಕ ನೀರಜ್ ಗ್ರೋವರ್ ಅವರ ಹತ್ಯೆಯ ಆರೋಪದ ಮೇಲೆ ಜೈಲುವಾಸ ಅನುಭವಿಸಿದ್ದ ಕನ್ನಡ ನಟಿ ಮೋನಿಕಾ ಮತ್ತೆ ಪೊಲೀಸ್ರಿಗೆ ಸಿಕ್ಕಿಬಿದ್ದಿದ್ದಾರೆ. ವಂಚನೆ ಪ್ರಕರಣವೊಂದರಲ್ಲಿ ಅಹಮದಾಬಾದ್ ಪೊಲೀಸ್ರು ಮೋನಿಕಾರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರು ಮೂಲದ ಮಾಡೆಲ್ ಕಮ್ ನಟಿ  ಕನ್ನಡದ ಜೂಟ್ ಚಿತ್ರ ಖ್ಯಾತಿಯ ಮರಿಯಾ ಮೋನಿಕಾ ಸುಸೈರಾಜ್ ನೀರಜ್ ಗ್ರೋವರ್  ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ರು. ನಂತ್ರ ಕೇಸ್ ನಿಂದ ಆರೋಪಮುಕ್ತರಾಗಿ ಹೊರಗೆಬಂದಿದ್ರು.

ಇದೀಗ ಮೋನಿಕಾ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಅದು ವಂಚನೆ ಪ್ರಕರಣದಲ್ಲಿ. ಹಜ್ ಯಾತ್ರಿಕರ ಹಣ ಲಪಾಟಿಸಿದ ಆರೋಪವನ್ನ್ ಮೋನಿಕಾ ಮೇಲಿದೆ. ನಟಿಯ ಟ್ರಾವೆಲ್  ಏಜೆನ್ಸಿ ಹಜ್ ಯಾತ್ರಿಕರಿಂದ ಹಣ ಪಡೆದು ಟಿಕೆಟ್ ಬುಕ್ ಮಾಡಿಕೊಡುವ ಜವಾಬ್ದಾರಿ ಹೊತ್ತುಕೊಂಡಿತ್ತು. ಅದ್ರೆ ಹಜ್ ಯಾತ್ರೆಗ  ಟಿಕೆಟ್ ಬುಕ್ ಮಾಡದೆ ಜನರಿಂದ  2.68 ಕೋಟಿ ಹಣ ವಸೂಲಿ ಮಾಡಿತ್ತು. ಎಂದು ದೂರು ದಾಖಲಾಗಿತ್ತು. ವಡೋದರಾದಲ್ಲಿ ಮೋನಿಕಾ ಅವರ ಏರ್ ಟಿಕೆಟ್ ಬುಕ್ಕಿಂಗ್ ಏಜೆನ್ಸಿ ಇದೆ.

ಹಜ್ ಯಾತ್ರಿಕರ ಟಿಕೆಟ್ ಬುಕ್ ಮಾಡಲು ಮುಂಗಡ ಹಣ ಪಡೆದುಕೊಂಡಿದ್ದಾರೆ. ಆದ್ರೆ ಟಿಕೆಟ್ ಬುಕಿಂಗ್ ಕ್ಯಾನ್ಸಲ್ ಮಾಡಿ 2.68 ಕೋಟಿ ರು ತೆಗೆದುಕೊಂಡು ಎಸ್ಕೇಪ್ ಆಗೋ ವೇಳೆ ಖಾಖಿ ಕೈಗೆ ಸಕ್ಕಿಬಿದ್ದಿದ್ದಾರೆ. 2008ರ ಮೇ 7ರಂದು ಗ್ರೋವರ್ ಮರಿಯಾಳ ಮನೆಗೆ ಹೋಗಿದ್ದನು. ಅಲ್ಲಿ ಗ್ರೋವರ್ ಮತ್ತು ಆಕೆಯ ಸ್ನೇಹಿತನ ಜೊತೆ ಗಲಾಟೆ ನಡೆದಿತ್ತು.ನಂತ್ರ ಜೆರೋಮ್ ಮತ್ತು ಮೋನಿಕಾ ಸೇರಿ ಗ್ರೋವರ್ ಅನ್ನ ಸಾಯಿಸಿದ್ರು. ನಂತ್ರ ಮೃತದೇಹವನ್ನ ಇಬ್ಬರು ಸೇರಿ ಕತ್ತರಿಸಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋನಿಕಾ ಜೈಲು ಸೇರಿದ್ರು. ಆದ್ರೆ ಈ ಕೇಸ್ ನಲ್ಲಿ ಖುಲಾಸೆಯಾಗಿ ಜೈಲಿನಿಂದ ಹೊರಗೆ ಬಂದಿದ್ದರು.

Write A Comment