ಸ್ಯಾಂಡಲ್ ವುಡ್ ಸದ್ಯ ಹೊಸಬರ ಅಲೆ ಶುರುವಾಗಿದೆ. ಹೊಸ ಪ್ರತಿಭೆಗಳಿಗೆ ಗಾಂಧೀನಗರದಲ್ಲಿ ಉತ್ತಮ ಅವಕಾಶ ಸಿಗುತ್ತಿದೆ. ಹೀಗಿರುವಾಗಲೇ ಚಂದನವನದಲ್ಲಿ 254 ವರ್ಷದ ಯುವಕನೊಬ್ಬ ಹೊಸ ಸಾಧನೆಯೊಂದನ್ನು ಮಾಡಿದ್ದಾನೆ.
ಅಂದ್ಹಾಗೆ ಈ ಯುವಕನ ಹೆಸರು ಪ್ರವೀಣ್ ಶಂಭು. ಪ್ರವೀಣ್ ಫಸ್ಟ್ ರ್ಯಾಂಕ್ ರಾಜು ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದ್ದಾರೆ. ಆ ಮೂಲಕ ಸ್ಯಾಂಡಲ್ ವುಡ್ ನ ಅತೀ ಕಿರಿಯ ಕ್ಯಾಮೆರಾ ಮೆನ್ ಅನ್ನೋ ಹೆಗ್ಗಳಿಕೆಗೆ ಪ್ರವೀಣ್ ಪಾತ್ರರಾಗಿದ್ದಾರೆ. ಇನ್ನು ಪ್ರವೀಣ್ ಕೆಲಸಕ್ಕೆ ಈಗಾಗಲೇ ಎಲ್ಲೆಡೆ ಪ್ರಶಂಸೆಗಳು ಕೇಳಿ ಬರುತ್ತಿವೆ.
ಪ್ರವೀಣ್ ಈ ಹಿಂದೆ ಹಿಂದಿ ಸಿನಿಮಾಗಳಲ್ಲೂ ಕೆಲಸ ಮಾಡಿದ್ದು. ಕನ್ನಡದ ಬಹದ್ದೂರ್ ಸಿನಿಮಾದಲ್ಲೂ ಕೆಲಸ ನಿರ್ವಹಿಸಿದ್ದರು. ಇನ್ನು ಈಗಾಗಲೇ ಫಸ್ಟ್ ರ್ಯಾಂಕ್ ರಾಜು ಸಿನಿಮಾದಲ್ಲಿ ಪ್ರವೀಣ್ ಕೆಲಸ ನೋಡಿ ಅವರಿಗೇ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಅನೇಕ ಆಫರ್ ಗಳು ಬರ್ತಿವೆಯೆಂತ. ಈಗಾಗಲೇ ಹೊಂಬಣ್ಣ ಅನ್ನೋ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಸದ್ಯ ಪ್ರವೀಣ್ ಗೆ ಸಿಗುತ್ತಿರುವ ಪ್ರಶಂಸೆ ನೋಡಿದರೆ ಅವರು ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.