ಮಂಗಳೂರು, ಅ.9: ಸಾಹಿತ್ಯದಲ್ಲಿ ಸೃಜನಶೀ ಲತೆ ಬತ್ತಿಹೋಗಬಾರದು. ಪ್ರಸಕ್ತ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಮೇಲೆ ಆಗುತ್ತಿರುವ ತೊಂ ದರೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನಗಳಾಗ ಬೇಕಾಗಿವೆ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.
‘ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋ ತ್ಸವ’ದ ಅಂಗವಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಶಾರದಾ ವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕನ್ನಡ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಾಹಿತ್ಯ ಪ್ರಕಾರಗಳ ಮೇಲೆ ಆಗುತ್ತಿರುವ ಆಘಾತಗಳ ಕುರಿತು ಮುನ್ನೆಚ್ಚರಿಕೆ ವಹಿಸ ಬೇಕಿದೆ. ಸೃಜನಶೀಲತೆ ಬತ್ತಿಹೋಗುವ ಕಾಲ ಘಟ್ಟಕ್ಕೆ ನಾವಿಂದು ತಲುಪುತ್ತಿರುವುದು ವಿಪ ರ್ಯಾಸ. ಒಂದೆಡೆ ಹಳೆಗನ್ನಡ ಸಾಹಿತ್ಯ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಛಂದಸ್ಸು ಸೇರಿದಂತೆ ಸಾಹಿತ್ಯದ ಪ್ರಕಾರಗಳನ್ನು ಓದಿ ಅರ್ಥೈಸಿಕೊಳ್ಳುವವರ ಸಂಖ್ಯೆ ವಿರಳವಾಗುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಮಾತನಾಡಿ, ಕನ್ನಡ ಸಾಹಿತ್ಯ ಚಟುವಟಿಕೆಗಳು, ಪ್ರಮುಖ ಬರಹಗಾರರ ಕುರಿತು ದಾಖಲೀಕರಣ ಅಗತ್ಯ. ಕನ್ನಡ ಸಾಹಿತ್ಯಕ್ಕಾಗಿಯೇ ಜೀವನ ಮುಡಿಪಿಟ್ಟ ವರ ಬಗ್ಗೆ ಮಾಹಿತಿ ಕೋಶ ರಚಿಸಬೇಕಾದ ಅಗತ್ಯವಿದೆ. ಜಿಲ್ಲಾವಾರು ಸಾಹಿತ್ಯ ಚರಿತ್ರೆ ರಚಿ ಸುವ ಕೆಲಸ ಸಾಹಿತ್ಯ ಪರಿಷತ್‌ನಿಂದ ಆದರೆ ಬಹುದೊಡ್ಡ ಕಾರ್ಯವಾದಂತೆ ಎಂದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ನಿತ್ಯಾನಂದ ಕಾರಂತ ಪೊಳಲಿ, ವಾಸುದೇವರಾವ್ ಸುರತ್ಕಲ್, ಗಂಗಾಧರ ಬೆಳ್ಳಾರೆ, ಸೇಸಪ್ಪ ಗೌಡ, ಜಯಂತಿ ಎಸ್. ಬಂಗೇರ, ಲೀಲಾವತಿ ದಾಮೋದರ, ಜಾನ್ ಚಂದ್ರನ್, ಗಿರಿಜಾ ಎಂ.ವಿ., ಬಿ.ಎಂ.ಇಚ್ಲಂಗೋಡು ಹಾಗೂ ಕೈಯೂರು ನಾರಾಯಣ ಭಟ್‌ರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಸಾಪ ಹೊರ ತಂದ ಕೃತಿಯನ್ನು ಕರ್ಣಾಟಕ ಬ್ಯಾಂಕಿನ ಮುಖ್ಯಮಹಾಪ್ರಬಂಧಕ ಎಂ.ಎಸ್.ಮಹಾಬಲೇಶ್ವರ ಭಟ್ ಬಿಡುಗಡೆ ಗೊಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್‌ಕುಮಾರ್ ಕಲ್ಕೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಂಪ್ಯೂಟರ್ ಲಿಪಿತಜ್ಞ ಕೆ.ಪಿ.ರಾವ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮಹಮ್ಮದ್ ಹನ್ೀ, ತುಳು ನಾಡು ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಸುನೀತಾ, ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಎಂ.ಪಿ.ಶ್ರೀನಾಥ್ ಮುಖ್ಯ ಅತಿಥಿಗಳಾಗಿದ್ದರು. ಶತಮಾನೋತ್ಸವ ಸಮಿತಿಯ ಬಿ.ಐತಪ್ಪ ನಾಯ್ಕಾ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.









