ಸೌದಿ ಅರೇಬಿಯಾ : ಪುತ್ತೂರು ತಾಲೂಕಿನ ಸಮನ್ವಯ ವಿಧ್ಯಾ ಕೇಂದ್ರ ಕೆ ಐ ಸಿ ಪ್ರಚಾರಾರ್ಥ ವಾಗಿ ಸೌದಿ ಅರೇಬಿಯಾದ ಬುರೈದ ಲೆಸ್ ಇಸ್ತಿರಾದಲ್ಲಿ ಅಕ್ಟೋಬರ್ ೦೧ ರಂದು ಬೃಹತ್ ಈದ್ ಮೀಟ್ ಕಾರ್ಯಕ್ರಮವು ಕೆ ಐ ಸಿ ಸ್ವಾಗತ ಸಮಿತಿ ಅದ್ಯಕ್ಷರಾದ ಶಾಕಿರ್ ಬೊಳ್ಳಾಯಿ ಇವರ ಅದ್ಯಕ್ಷತೆಯಲ್ಲಿ ನಡೆಸಲಾಯಿತು.
ಸೌದಿ ಅರೇಬಿಯಾದ ವಿವಿದ ಪ್ರದೇಶಗಳಿಂದ ಆಗಮಿಸಿದ ಹಲವಾರು ಕೆ ಐ ಸಿ ಹಿತೈಷಿಗಳಿಂದ ಕೂಡಿದ ಈ ಕಾರ್ಯಕ್ರಮವನ್ನು ಅಶ್ರಫ್ ಅಮ್ಜಾದಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಾಯಿ ನಾಡಿನ ಇಂತಹ ವಿಧ್ಯಾ ಸಂಸ್ಥೆಗಳನ್ನು ಪೋಷಿಸಿ ನಾಳೆ ಪರಲೋಕ ಪ್ರಾಪ್ತ ರಾಗುವಂತೆ ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಕೆ ಐ ಸಿ ನೂತನ ಸಮಿತಿ ಕಾರ್ಯದರ್ಶಿ ಝಕರಿಯಾ ಕೊರಿಂಗಿಲ ರವರು ಸ್ವಾಗತಿಸಿ, ವಿಧ್ಯಾ ಸಂಸ್ಥೆಯನ್ನು ಉಲ್ಲೇಖಿಸಿ ಮಾತನಾಡಿ, ತಾನು ಅಕಾಡೆಮಿಗೆ ಭೇಟಿ ನೀಡಿದ ಸಂಧರ್ಭವನ್ನು ನೆನಪಿಸಿಕೊಂಡು ಇಂತಹ ವಿಧ್ಯಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ತರುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ ಎನ್ನುತ್ತಾ ಸರ್ವರ ಸಹಕಾರ ಕೋರಿದರು.
ನಂತರ ಮುಖ್ಯ ಪ್ರಭಾಷಣ ಗಾರರಾಗಿ ಆಗಮಿಸಿದ ಇಂಡಿಯನ್ ಸ್ಕೂಲ್ ತಬೂಕ್ ಇದರ ಚಯರಮಾನ್, ಎ.ಆರ್ ಅಬ್ದುಲ್ ರಹ್ಮಾನ್ ದಾರಿಮಿ ಕೀನ್ಯ ರವರು ಮಾತನಾಡುತ್ತಾ ನಮಗೆ ಹಿರಿಯರು , ಗುರುಗಳು ಹೇಳಿಕೊಟ್ಟ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿದಲ್ಲಿ ನಮ್ಮ ಜೀವನ ಹಸನಾಗಲು ಸಾದ್ಯ , ನಮ್ಮನ್ನಗಲಿದ ನೇತಾರರ ಆದರ್ಶಗಳನ್ನು ಪಾಲಿಸುತ್ತಾ ಇಂತಹ ಯತೀಂ ಮಕ್ಕಳನ್ನು, ನಿರ್ಗತಿಕರನ್ನು ಪೋಷಿಸಿ ಅವರಿಗೆ ತಮ್ಮಿಂದಾದ ಸಹಾಯವನ್ನು ನೀಡಬೇಕಾದುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಕುಟುಂಬ ನಿರ್ವಹಣೆಗಾಗಿ ಕಡಲಾಚೆಗೆ ಪ್ರಯಾಣಿಸಿದ ನಮ್ಮಂತಹ ಯುವ ಸಮೂಹಗಳ ಬೆವರಿನ ಫಲವಾಗಿ ಇಂದು ತಾಯಿ ನಾಡಿನಲ್ಲಿ ಅದೆಷ್ಟೋ ವಿಧ್ಯಾ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ. ಇಂದು ನಾವು ವ್ಯಯಿಸುತ್ತಿರುವ ಪ್ರತಿಯೊಂದು ನಿಮಿಷವೂ ನಾಳೆ ಪರಲೋಕದಲ್ಲಿ ಶಾಕ್ಷಿಯಾಗಿ ನಮ್ಮ ಮೇಲೆ ಕರುಣೆ ತೋರಲಿದ್ದು , ಜಗತ್ತಿನ ಪ್ರತಿಯೊಂದು ಧರ್ಮವು ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ. ಪವಿತ್ರ ಇಸ್ಲಾಂ ಧರ್ಮವು ಒತ್ತಿಹೇಳಿದ ಒಂದು ವಿಚಾರವಾಗಿದೆ ವಿಧ್ಯಾಭ್ಯಾಸ ವಿಲ್ಲದ ವ್ಯಕ್ತಿಯು ಪ್ರಾಣಿ ಸಮಾನ , ಆದರಿಂದ ನಮ್ಮ ಮುಂದಿನ ಪೀಳಿಗೆಗೆ ಸಹಕಾರಿಯಗಲೆಂದು ನಮ್ಮ ನೇತಾರರು , ವೇದಿಕೆ ಮೇಲಿನ ಉಮರಾಗಳು ಕೆ ಐ ಸಿ ಎಂಬ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಮುಂದೆ ಬಂದಿದ್ದು, ತಮ್ಮಂತಹ ದೀನೀ ಪ್ರೇಮಿಗಳ ಸಹಕಾರದೊಂದಿಗೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೆ ಐ ಸಿ ನೂತನ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾದ ಅಬ್ದುಲ್ ಲತೀಫ್ ಗುಂಡ್ಯಡ್ಕ ರವರು ಕೆ ಐ ಸಿ ವಿಧ್ಯಾ ಸಂಸ್ಥೆ ಬೆಳೆದು ಬಂದ ಹಾದಿ , ಅಲ್ಲಿನ ಶಿಕ್ಷಣ ಪದ್ಧತಿಗಳ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದರು .
ವೇದಿಕೆಯಲ್ಲಿ ಉಪಸ್ತಿತರಿದ್ದ ಸೌದಿ ಅರೇಬಿಯಾ ಸ್ವದೇಶೀ , ಶೈಖ್ ಅಬೂ ಫಹದ ಕಾರ್ಯಕ್ರಮದ ಕೊನೆಯ ಹಂತದ ವರೆಗೂ ವೀಕ್ಷಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಕೆ ಐ ಸಿ ಬುರೈದ ಘಟಕದ ಗೌರವಾದ್ಯಕ್ಷರು , ದಾರುಲ್ ಇರ್ಶಾದ್ ಮಣಿ ಬುರೈದ ಘಟಕದ ಅದ್ಯಕ್ಷರಾದ ಮುಹಮ್ಮದ್ ಹಾಜಿ ಕುಕ್ಕುವಳ್ಳಿ , ಸುನ್ನಿ ಸೆಂಟರ್ ಬುರೈದ ಘಟಕದ ಅದ್ಯಕ್ಷರಾದ ಮುಹಮ್ಮದ್ ಕುಲ , ಮರ್ಕಝುಲ್ ಹುದ ಕುಂಬ್ರ ಬುರೈದ ಘಟಕದ ಅದ್ಯಕ್ಷರಾದ ಹಮೀದ್ ಕೊಮ್ಮೆಮ್ಮಾರ್ , ಕೆ ಐ ಸಿ ಸ್ವಾಗತ ಸಮಿತಿ ಅದ್ಯಕ್ಷರು , ನೂತನ ಸಮಿತಿಯ ಕಾರ್ಯದಕ್ಷರಾದ ಶಾಕಿರ್ ಬೊಳ್ಳಾಯಿ, ಅಲ್ ಅಮೀನ್ ಹೆಲ್ಪ್ ಗ್ರೂಪ್ ಇದರ ಅದ್ಯಕ್ಷರಾದ ಅಬ್ದುಲ್ ರಜಾಕ್ ಪುತ್ತೂರು , ನವಾಜ್ ಮಂಗಳೂರ್ , ಕಾಕಾ ಗೈಸ ನ ಮೋಯಿದೀನ್ ಖಾದರ್ , ಖಾದರ್ ಪಾಂಡಾ , ಕೆ ಐ ಸಿ ಬುರೈದ ನೂತನ ಅದ್ಯಕ್ಷರಾದ ಶಾಫಿ ಕೆಕನಾಜೆ ಉಪಸ್ಥಿತರಿದ್ದು ಸಂಧರ್ಬೋಜಿತವಾಗಿ ಮಾತನಾಡಿ ಸಮಿತಿಯ ಯಶಸ್ಸಿಗೆ ಶುಭ ಹಾರೈಸಿದರು,
ಕೆ ಐ ಸಿ ಪತ್ರಿಕಾ ಪ್ರತಿನಿದಿಯಾದ ಮುಸ್ತಾಕ್ ಕೊಡಿಂಬಾಡಿ ಕಾರ್ಯಕ್ರಮ ನಿರೂಪಿಸಿದರು ಅಬ್ದುಲ್ ಅಜೀಜ್ ಪೇರಲ್ತಡ್ಕ ವಂದಿಸಿದರು , ಇದೇ ಸಂಧರ್ಬದಲ್ಲಿ ಕೆ ಐ ಸಿ ಬುರೈದ ನೂತನ ಸಮಿತಿಗೆ ಚಾಲನೆ ನೀಡಿ ಅಧಿಕೃತವಾಗಿ ಘೋಷಿಸಲಾಯಿತು.
ಅದರಂತೆ ನೂತನ ಸಮಿತಿ ಪಧಾಧಿಕಾರಿಗಳಾಗಿ
ಗೌರವಾಧ್ಯಕ್ಷರು : ಮುಹಮ್ಮದ್ ಹಾಜಿ ಕುಕ್ಕುವಲ್ಲಿ
ಅಧ್ಯಕ್ಷರು : ಶಾಫಿ ಕೇಕನಾಜೆ
ಕಾರ್ಯಾಧ್ಯಕ್ಷರು : ಶಾಕಿರ್ ಬೋಳ್ಲಾಯಿ
ಉಪಾಧ್ಯಕ್ಷರು : ಅಬ್ಬಾಸ್ ಕಂಡಿಗ , ಶಾಫಿ ಪೆರುವಾಯಿ, ಹಮೀದ್ ಕೊಮ್ಮೆಮ್ಮಾರ್
ಪ್ರಧಾನಕಾರ್ಯದರ್ಶಿ : ಅಬ್ದುಲ್ ಲತೀಫ್ ಗುಂಡ್ಯಡ್ಕ
ಕಾರ್ಯದರ್ಶಿ : ಝಕರಿಯಾ ಕೊರಿಂಗಿಲ ,
ಜೊತೆ ಕಾರ್ಯದರ್ಶಿ ಇರ್ಶಾದ್ ಮಾಝಿನ್ , ಅಬ್ದುಲ್ ಅಝೀಝ್ಃ ಪೇರಲ್ತಡ್ಕ
ಕೋಶಾಧಿಕಾರಿ : ಅಬ್ಬಾಸ್ ಆಲಿ ಕುಕ್ಕುವಲ್ಲಿ
ಲೆಕ್ಕಪರಿಶೋಧಕರು : ಅಬ್ದುಲ್ ರವೂಫ್
ಸಂಘಟನಕಾರ್ಯದರ್ಶಿ : ಮುಹಮ್ಮದ್ ಮೂಡಂಬೈಲ್ , ಉಮರ್ ಉಪ್ಪಿನಂಗಡಿ, ಶರೀಫ್ ಕುಕ್ಕುವಳ್ಳಿ
ಸಂಚಾಲಕರು : ಮುಹಮ್ಮದ್ ಕುಲ, ನವಾಝ್ಃ ಮಂಗಳೂರು, ತಾಜುದ್ದೀನ್ ಉಪ್ಪಿನಂಗಡಿ
ಪತ್ರಿಕಾ ಪ್ರತಿನಿಧಿ : ಮುಸ್ತಾಕ್ ಕೊಡಿಂಬಾಡಿ
ಗೌರವಸಲಹೆಗಾರರು : ಅಬ್ದುಲ್ ರಝಾಕ್ ಪುತ್ತೂರು, ಹಿನಾಯತ್ ಬೆಂಗಳೂರು , ರಝಾಕ್ ಸಚ್ಚಾರಿಪೇಟೆ, ಮೊಹಿಯುದ್ದೀನ್ ಖಾದರ್
ಧಾರ್ಮಿಕಸಲಹೆಗಾರರು : ಅಶ್ರಫ್ ಅಮ್ಜದಿ , ಅಬ್ದುಲ್ ರಹ್ಮಾನ್ ದಾರಿಮಿ ಕೀನ್ಯ
ಕಾರ್ಯಕಾರಿಸಮಿತಿ : ರಫೀಕ್ ಬೋಳ್ಳಿಂಬಲ, ಶಾಫಿ ನೂಜಿ , ರಫೀಕ್ ಆರ್ಲಪದವು, ಹನೀಫ್ ವಿಟ್ಲ , ಲತೀಫ್ ವೈ.ಎಂ.ಕೆ, ಅಸೀಫ್ ಕೂಟತ್ತಾನ , ಇಸ್ಮಾಯಿಲ್ ಆನಡ್ಕ , ಜಮಾಲ್ ಅಡ್ಡೂರು, ಖಾದರ್ ಪಾಂಡ , ರಝಾಕ್ ನೆಕ್ಕಿಲ್ , ಜಾಬೀರ್ ಕೆಕನಾಜೆ , ಶಂಸುದ್ದೀನ್ ಶಾರಾವು, ಹಮೀದ್ ಬೆಳ್ಳಾರೆ, ಅಬ್ದುಲ್ ಖಾದರ್ ಮಲಾರ್, ಅಬ್ದುಲ್ ಖಾದರ್ ಕಂಬಳಬೆಟ್ಟು , ಜಲೀಲ್ ಕೇಕನಾಜೆ , ಎ.ಕೆ ಹಮೀದ್ ಅತೂರು. ಅಶ್ರಫ್ ರೆಂಜ, ಉಸ್ಮಾನ್ ಟೈಲರ್.
ಸಭಾ ಕಾರ್ಯಕ್ರಮದ ನಂತರ ಕುಕ್ಕುವಳ್ಳಿ ಸ್ಪೋರ್ಟ್ಸ್ ಕ್ಲಬ್ ವತಿ ಇಂದ ವಿವಿಧ ಕಾರ್ಯಕ್ರಮಗಳು ನಡೆಸಲಾಯಿತು , ಸ್ಥಳದಾನದ ವ್ಯವಸ್ಥೆಯನ್ನು ನವಾಜ್ ಮಂಗಳೂರು ನೀಡಿದರೆ ಊಟದ ವ್ಯವಸ್ಥೆಯನ್ನು ಶಾಕೀರ್ ಬೊಳ್ಳಾಯಿ ಮತ್ತು ಬಹುಮಾನಗಳ ಪ್ರಾಯೂಜಗತ್ವವನ್ನು ಮುಹಮ್ಮದ್ ಹಾಜಿ ಕುಕ್ಕುವಳ್ಳಿ ನೀಡಿ ಸಹಕರಿಸಿದರು.




