ಕನ್ನಡ ವಾರ್ತೆಗಳು

ಜೀ ಕುಟುಂಬ ಅವಾರ್ಡ್ಸ್ – 2015 : ಅಕ್ಟೋಬರ್ 18ರಂದು ಪ್ರಶಸ್ತಿ ಪುರಸ್ಕರ

Pinterest LinkedIn Tumblr

Zee_Kutumba_award_1

ಬೆಂಗಳೂರು / ಮಂಗಳೂರು: ಪ್ರತೀ ಚಾನೆಲ್ಲಿಗೂ ಒಂದು ಧ್ಯೇಯವಿದೆ.ಕನಸಿದೆ.ಜೀ ಕನ್ನಡದ ಐಕ್ಯತೆಯ ಮಂತ್ರ -ಕನ್ನಡಿಗರೆಲ್ಲರೂ ಒಂದು ಕುಟುಂಬ ಎನ್ನುವುದು. ಜೀ ವಾಹಿನಿಯ ಧ್ಯೇಯ.ಇದು ಕನ್ನಡಿಗರೆಲ್ಲರ ಕುಟುಂಬ.

2015ರ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಇದನ್ನ ಸಾಕಾರ ಪಡಿಸಲು ಮುಂದಡಿ ಇಟ್ಟಿದೆ.ಕನ್ನಡಿಗರೆಲ್ಲರೂ ಒಂದೇ ಕುಟುಂಬವಾಗಿ ಸಂಭ್ರಮಿಸಲು ತನ್ನ ಬಳಗವನ್ನು ಕರೆದು ಅಕ್ಟೋಬರ್ 18ರಂದು ಪುರಸ್ಕರಿಸುತ್ತಿದೆ. ಇದಕ್ಕಾಗಿ ಜೀ ವಾಹಿನಿಯ ಪ್ರೇಕ್ಷಕರೆಲ್ಲರೂ ಒಂದೇ ಕಡೆ ಸೇರಿ ಸಂಭ್ರಮಿಸಲಿದ್ದಾರೆ.ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ರವಿಶಂಕರ್,ಭಾರತಿ ವಿಷ್ಣುವರ್ಧನ್ ಮತ್ತು ತಾರಾರವರು ಜ್ಯೂರಿಗಳಾಗಿ ಜೀ ಕನ್ನಡ ಆರಿಸಿದೆ.

Zee_Kutumba_award_2 Zee_Kutumba_award_3

Zee_Kutumba_award_4 Zee_Kutumba_award_5

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತನ್ನ ಸಹಸ್ರ ಅಭಿಮಾನಿಗಳ ಜೊತೆ ಜೀ ತಾರಾಮೇಳವನ್ನು ಕಟ್ಟಿಕೊಂಡು ರಂಗೇರಲಿದೆ.ಅಂದಿನಿಂದ ಇಡೀ ಚಾನೆಲ್ಲಿನ ಲುಕ್,ಥೀಮಲ್ಲಿ ಬದಲಾವಣೆ ತರಲಾಗುತ್ತದೆ.ಮನರಂಜನೆಯ ಹೊಸ ಸಾಧ್ಯತೆಗಳಿಗೆ ಕುಟುಂಬ ಅವಾರ್ಡ್ಸ್ ನಾಂದಿಯಾಗಲಿದೆ ಎಂದು-ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಶ್ರೀ ರಾಘವೇಂದ್ರ ಹುಣಸೂರ್ ಅಭಿಪ್ರಾಯಿಸುತ್ತಾರೆ.

ಒಟ್ಟು ಮೂವತ್ತಾರು ಕ್ಯಾಟಗೆರಿಗಳು ಕುಟುಂಬ ಅವಾರ್ಡ್ಸ್ನನಲ್ಲಿದ್ದು ,ಐದು ಪ್ರಶಸ್ತಿಗಳನ್ನು ಜನರೇ ಆಯ್ಕೆ ಮಾಡಲಿದ್ದಾರೆ.ಇದಕ್ಕಾಗಿ ನಿಯಮಿಸಿದ ಅಭಿಮಾನೀ ಎಕ್ಸ್ ಪ್ರೆಸ್ ಮಂಡ್ಯದಿಂದ ಆರಂಭಿಸಿ, ಮೈಸೂರು,ಮಂಗಳೂರು,ಹಾಸನ,ಹುಬ್ಬಳ್ಳಿ,ಧಾರವಾಡ,ಚಿತ್ರದುರ್ಗ,ತುಮಕೂರು,ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಸಂಚರಿಸಲಿದ್ದು,ಜನರ ಮತಗಳನ್ನು ಸಂಗ್ರಹಸಲಿದೆ.

ಇದಲ್ಲದೆ ಮಹಾ ಜ್ಯೂರಿಗಳು 27 ಅವಾರ್ಡುಗಳಿಗೆ ಕಿರುತೆರೆ ತಾರೆಗಳನ್ನು ಆಯ್ಕೆ ಮಾಡಲಿದೆ.ಜೊತೆಗೆ ತಾರೆಗಳ ಕುಣಿತ ಹೊಸ ಅನುಭವವನ್ನು ಈ ಬಾರಿ ನಾಲಕ್ಕನೇ ಕುಟುಂಬ ಅವಾರ್ಡ್ಸ್ ಕಟ್ಟಿಕೊಡಲಿದೆ.

ಇದೇ ಮೊಟ್ಟಮೊದಲ ಬಾರಿಗೆ ಘಟಾನುಘಟಿಗಳು ಕುಟುಂಬ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

ಶ್ರೀ ರಮೇಶ್ ಅರವಿಂದ್ ಅರುಣ್ ಸಾಗರ್,ಅನೂಶ್ರೀ,ಶಾಲಿನಿ.ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಮೊದಲಾದ ಖ್ಯಾತ ನಾಮರು .ನಿರೂಪಿಸಲಿದ್ದಾರೆ. ಕುಟುಂಬ ಅವಾರ್ಡ್ಸ್ ಈ ಮೂಲಕ ಮನರಂಜನೆಯ ಹೊಸ ಸಾಧ್ಯತೆಗಳನ್ನು ಕ್ರಮಿಸಿ ಕಿರುತೆರೆಯಲ್ಲಿ ಹೊಸತನಕ್ಕೆ ನಾಂದಿ ಹಾಡಲಿದೆ.

ಹೆಚ್ಚಿನ ವಿವರಕ್ಕಾಗಿ ರಾಕೇಶ್ (8904423051 / 080-67720321) ಅವರನ್ನು ಸಂಪರ್ಹಿಸುವಂತೆ ಕೋರಲಾಗಿದೆ.

Write A Comment