ಬೆಂಗಳೂರು: ಇತ್ತೀಚೆಗಷ್ಟೇ ಟಿಟಿ ವಾಹನದಲ್ಲಿ ಬಿಪಿಓ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ನಗರದಲ್ಲಿ ಮತ್ತೊಂದು ವಿಕೃತ ಸಾಮೂಹಿಕ ಅತ್ಯಾಚಾರ ಪ್ರಕರಣ ವರದಿಯಾಗಿದೆ.
ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಾಲ್ ಸೆಂಟರ್ ಯುವಕರ ಮೇಲೆ ಮತ್ತೊಂದು ಯುವಕರ ಗುಂಪು ಗ್ಯಾಂಗ್ ರೇಪ್ ನಡೆಸಿರುವ ವಿಲಕ್ಷಣ ಘಟನೆ ನಡೆದಿದೆ.
ಕಾರಿನಲ್ಲಿ ಬಂದ ಮೂವರು ಕಾಮುಕರು ಕಾಲ್ ಸೆಂಟರ್ ಉದ್ಯೋಗಿಗಳಿದ್ದ ಟಿಟಿ ತಡೆದು ಒಳಗಿದ್ದ ಇಬ್ಬರು ಯುವಕರ ಮೇಲೆ ವಿಕೃತಕಾಮ ತೀರಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 29ರಂದು ಮೈಕೋ ಲೇಔಟ್‌ನ 16ನೇ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಕಾಮಾಂಧರು ಬಳಿಕ ಕಾಲ್ ಸೆಂಟರ್ ಉದ್ಯೋಗಿಗಳ ಬಳಿಯಿದ್ದ ಮೊಬೈಲ್, ಲ್ಯಾಪ್ ಟಾಪ್ ದೋಚಿ ಪರಾರಿಯಾಗಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
