ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಕೋಳಿಅಂಕ ನಡೆಸಿ ಜುಜಾಟ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಗೋಳಿಯಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿಗಳ ಕಾಲುಗಳಿಗೆ ಕತ್ತಿ (ಬಾಳು) ಕಟ್ಟಿ ಕಾದಾಟಕ್ಕೆ ಬಿಟ್ಟು ಅವುಗಳ ಮೇಲೆ ಹಣವನ್ನು ಪಣವಾಗಿರಿಸಿ ಜೂಜಾಟ ಆಡುತಿದ್ದ ವೇಳೆ ಈ ಕಾರ್ಯಾಚರಣೆ ನಡೆದಿದೆ.
ಬಂಧಿತ ಆರೋಪಿಗಳನ್ನು ಬಸವರಾಜು, ಅಪ್ಪು ಪೂಜಾರಿ, ಬೋಜುನಾಯ್ಕ, ಶ್ರೀಧರ ಆಚಾರಿ, ಉಮೇಶ ತೋಳಾರ್, ವೀರೇಂದ್ರ, ಚಂದ್ರ ಪೂಜಾರಿ, ಪ್ರದೀಪ್ ಕುಲಾಲ್, ರಾಜೇಶ ಪೂಜಾರಿ, ಸಂತೋಷ ಶೆಟ್ಟಿ, ಕೀರ್ತನ ಶೆಟ್ಟಿ, ಉಮೇಶ ಪೂಜಾರಿ, ಕರುಣಾಕರ ಎಂದು ಗುರುತಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಎಚ್ಚೆತ್ತುಕೊಳ್ಳಲಿ: ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲೀಗಾ ಕ್ರೈಮ್ ಚಟುವಟಿಕೆಗಳು ಜಾಸ್ಥಿಯಾಗುತ್ತಲಿದೆ. ಮೊನ್ನೆಮೊನ್ನೆ ತಾನೇ ಒಂದೇ ದಿನದಲ್ಲಿ ಎರಡು ಅತ್ಯಾಚಾರ ಪ್ರಕರಣ, ಯುವತಿಯ ಅತ್ಯಾಚಾರ ಕೊಲೆ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳು ಜಾಸ್ಥಿಯಾದಂತಿದೆ. ಈ ಭಾಗದಲ್ಲಿ ಇನ್ನೂ ಹೆಚ್ಚಾಗಿ ವ್ಯಾಪಿಸಿದ್ದು ಮಟ್ಕಾ, ಕೋಳಿ ಅಂಕ ಮೊದಲಾದ ಜುಗಾರಿಗಳು ಮತ್ತು ಅಕ್ರಮ ಸಾರಾಯಿ ಮಾರಾಟ. ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಇಲ್ಲದಿದ್ದಲ್ಲಿ ಸಾಮಾನ್ಯ ಜನರು ಬಾಳೋದು ಬಾರೀ ಕಷ್ಟ.
