ಕನ್ನಡ ವಾರ್ತೆಗಳು

ಉಡುಪಿ: ಗಸ್ತು ತಿರುಗುವ ವೇಳೆ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ

Pinterest LinkedIn Tumblr

crime_writing_english

ಉಡುಪಿ: ರಾತ್ರಿ ಸಮಯದಲ್ಲಿ ಹೋಮ್ ಗಾರ್ಡ್ ಸಿಬ್ಬಂದಿಯವರೊಂದಿಗೆ ಉಡುಪಿ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ ಓರ್ವರು ಗಸ್ತು ತಿರುಗುತ್ತಿದ್ದ ವೇಳೆ ಸಂಶಯಾಸ್ಪದ ವ್ಯಕ್ತಿಯೋರ್ವ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದು ಆತನನ್ನು ಹಿಡಿಯಲು ಮುಂದಾದಾಗ ವ್ಯಕ್ತಿ ಪೊಲೀಸ್ ಕಾನ್‌ಸ್ಟೇಬಲ್‌ ಮೇಲೆಯೇ ಹಲ್ಲೆಗೆ ಮುಂದಾದ ಘಟನೆ ಸೋಮವಾರ ರಾತ್ರಿ 1:00 ಗಂಟೆ ಸುಮಾರಿಗೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ನಗರ ಠಾಣೆ ಕಾನ್‌ಸ್ಟೇಬಲ್‌ ಗಣೇಶ್‌ (28) ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ಆರೋಪಿಯನ್ನು ಚಿಕ್ಕಮಗಳೂರಿನ ಕೊಪ್ಪ ತಾಲೂಕು ಗುಲ್ಮಕ್ಕಿಯ ಸುನೀಲ್ ಪೂಜಾರಿ ಎನ್ನಲಾಗಿದೆ.

ಗಣೇಶ್ ಅವರು ಇನ್ನೋರ್ವ ಹೋಂ ಗಾರ್ಡ್ ಸಿಬ್ಬಂದಿಯೊಂದಿಗೆ ರಾತ್ರಿ ರೌಂಡ್ಸ್ ನಡೆಸುತ್ತಿದ ವೇಳೆ ಉಡುಪಿಯ ತ್ರಿವೇಣಿ ಸರ್ಕಲ್ ಸಮೀಪ ವ್ಯಕ್ತಿಯೋರ್ವ ಕತ್ತಲಿನಲ್ಲಿ ಶಂಕಾಸ್ಪದವಾಗಿ ಅವಿತುಕೊಂಡಿದ್ದ, ಟಾರ್ಚ್ ಬೆಳಕಿನಲ್ಲಿ ಆತನನ್ನು ನೋಡಿ ವಿಚಾರಿಸಲು ತೆರಳಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದ. ಆತನ ಚಲನವಲನದ ಬಗ್ಗೆ ಸಂಶಯಗೊಂಡು ಆತನನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದಾಗ ಟೂರಿಸ್ಟ್ ಲಾಡ್ಜ್ ಬಳಿ ಆತ ಗಣೇಶ್ ಅವರನ್ನು ಕಂಪೌಂಡ್ ಗೋಡೆಯ ಮೇಲೆ ದೂಡಿ, ಅಲ್ಲೆ ಇದ್ದ ಕಲ್ಲಿನಿಂದ ಬಲ ತೊಡೆಗೆ ಗುದ್ದಿದ್ದಾನೆ ಎನ್ನಲಾಗಿದೆ.

ಸಮವಸ್ತ್ರದಲ್ಲಿ ಕರ್ತವ್ಯದಲ್ಲಿರುವಾಗ ಆರೋಪಿ ಸುನೀಲ್ ಪೂಜಾರಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ ಬಗ್ಗೆ ಗಣೇಶ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment