ಓಸ್ಲೋ, ಅ.6: ಜಪಾನ್ನ ಟೋಕಿಯೊ ವಿಶ್ವವಿದ್ಯಾನಿಲಯದ ಟಕಾಕಿ ಕಜಿತ ಮತ್ತು ಕೆನಡಾದ ಕ್ವೀನ್ಸ್ ವಿಶ್ವವಿದ್ಯಾನಿಲಯದ ಆರ್ಥರ್ ಬಿ.ಮೆಕ್ಡೋನಾಲ್ಡ್ ಅವರಿಗೆ 2015ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಲಭಿಸಿದೆ.
ನ್ಯೂಟ್ರಿನೊಗಳಿಗೆ ಸಂಬಂಧಿಸಿದ ಸಂಶೋಧನೆಗಾಗಿ ಇವರಿಬ್ಬರಿಗೂ ಜಂಟಿಯಾಗಿ ಪ್ರಶಸ್ತಿ ನೀಡಲಾಗಿದೆ.
ಟಕಾಕಿ ಕಜಿತ ಅವರು ಟೋಕಿಯೊ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಇನ್ಸ್ಟಿಟ್ಯೂಟ್ ಆಫ್ ಕಾಸ್ಮಿಕ್ರೇ ರಿಸರ್ಚ್ನ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಮೆಕ್ಡೋನಾಲ್ಡ್ ಅವರು ಕ್ವೀನ್ಸ್ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.