ಕನ್ನಡ ವಾರ್ತೆಗಳು

ಮುಂಬಾಯಿ ಕನ್ನಡಿಗ ಪತ್ರಕರ್ತ ಸಂಘದಿಂದ ಪುಟ್ಟಬಾಲೆ ದಿತಿಯ ಬಳಂಜಳ ಚಿಕಿತ್ಸೆಗೆ 1,11,111 ರೂ. ಆರೋಗ್ಯನಿಧಿ ನೆರವು

Pinterest LinkedIn Tumblr

Beltangady_Press_Club_1

ಮುಂಬಯಿ, ಅ.06 : ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಸುಪುತ್ರಿ ಕು| ದಿತಿಯ ಬಳಂಜಳ ಶಸ್ತ್ರಚಿಕಿತ್ಸೆಗಾಗಿ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಸ್ಪಂದಿಸಿದ್ದು ರೂಪಾಯಿ ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂಪಾಯಿ ಮೊತ್ತವನ್ನು ಇಂದಿಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ಇದರ ಕಛೇರಿಯಲ್ಲಿ ಕು| ದಿತಿಯ ಬಳಂಜಳಿಗೆ ಹಸ್ತಾಂತರಿಸಿತು.

ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಮತ್ತು ಸಂಘದ ಭವನ ಸಮಿತಿ ಕಾರ್ಯಾಧ್ಯಕ್ಷ ಶಿವ ಮೂಡಿಗೆರೆ ಉಪಸ್ಥಿತರಿದ್ದು ಕು| ದಿತಿಯಳಿಗೆ ಆರೋಗ್ಯನಿಧಿ ಹಸ್ತಾಂತರಿಸಿದ್ದು, ಮನೋಜ್ ಬಳಂಜ ಮೊತ್ತವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಬಿ.ಎಸ್ ಕುಲಾಲ್, ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಜತೆ ಕಾರ್ಯದರ್ಶಿ ಅಶ್ರಫ್ ಆಲಿ ಕುಂಜ, ಸದಸ್ಯರುಗಳಾದ ಲಕ್ಷಿ ಮಚ್ಚಿನ, ಪುಷ್ಪರಾಜ ಶೆಟ್ಟಿ, ದೀಪಕ್ ಅಠವಳೆ, ಶಿಬಿ ಧರ್ಮಸ್ಥಳ, ಮಂಜುನಾಥ ರೈ ಸರ್ವರೂ ಕು| ದಿತಿಯ ಬಳಂಜಳಿಗೆ ಸರ್ವೋತ್ತಮ ಆಯುರಾರೋಗ್ಯ, ಉತ್ಕೃಷ್ಟ ಬದುಕನ್ನು ಹಾರೈಸಿದರು.

Beltangady_Press_Club_2 Beltangady_Press_Club_3 Beltangady_Press_Club_4

ಕು| ದಿತಿಯಳ ಚಿಕಿತ್ಸೆಗೆ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ಇದರ ಕೋರಿಕೆಯ ಮೇರೆಗೆ ತತ್‌ಕ್ಷಣವೇ ಕಾರ್ಯಪ್ರವೃತ್ತರಾದ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ವಿವಿಧ ದಾನಿಗಳು ಮತ್ತು ಸಂಸ್ಥೆಗಳಿಂದ ಆರೋಗ್ಯನಿಧಿಯಾಗಿ ರೂಪಾಯಿ 1,11,111/- ಧನ ಸಂಗ್ರಹಿಸಿದ್ದರು.

ಕನ್ನಡಿಗ ಪತ್ರಕರ್ತರ ಸಂಘದ ಚಂದ್ರಶೇಖರ ಪಾಲೆತ್ತಾಡಿ, ರೋನ್ಸ್ ಬಂಟ್ವಾಳ್, ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು, ಬಾಬು ಕೆ.ಬೆಳ್ಚಡ, ಅಶೋಕ್ ಎಸ್.ಸುವರ್ಣ, ಶಿವ ಎಂ.ಮೂಡಿಗೆರೆ, ಜಯ ಸಿ.ಪೂಜಾರಿ, ಸುಜ್ಹಾನ್ ಲಾರೇನ್ಸ್ ಕುವೆಲ್ಲೋ, ಜನಾರ್ದನ ರೈ ಪುರಿಯಾ, ಗ್ರೆಗೋರಿ ಡಿ’ಅಲ್ಮೇಡಾ, ಡಾ| ಆರ್.ಕೆ ಶೆಟ್ಟಿ (ಎಲ್‌ಐಸಿ), ಸಿ‌ಎ| ಐ.ಆರ್ ಶೆಟ್ಟಿ, ಪಂಡಿತ್ ನವೀನ್‌ಚಂದ್ರ ಆರ್.ಸನೀಲ್, ನ್ಯಾಯವಾದಿ ಬಿ.ಮೊಹಿದ್ಧೀನ್ ಮುಂಡ್ಕೂರು, ಸುರೇಂದ್ರ ಎ.ಪೂಜಾರಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ತೋನ್ಸೆ ಸಂಜೀವ ಪೂಜಾರಿ, ಪ್ರಶಾಂತ್ ಜಿ.ಅವಿನ್, ಭರತ್ ಎ.ಶೆಟ್ಟಿ, ಪ್ರಭಾಕರ್ ಬೆಳುವಾಯಿ, ರವಿ ಬಿ.ಅಂಚನ್ ಡೊಂಬಿವಿಲಿ, ಡಾ| ವ್ಯಾಸರಾಯ ನಿಂಜೂರು, ಪ್ರಭಾಕರ್ ಭಂಡಾರಿ ಥಾಣೆ, ವೈಯಕ್ತಿಕ ವಂತಿಗೆ ನೀಡಿದ್ದರು. ಅಂತೆಯೇ ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ, ದಾನಿಗಳಾದ ವಳಕಾಡು ಬಿ.ಆರ್ ಶೆಟ್ಟಿ ಅಂಧೇರಿ ಪಶ್ಚಿಮ, ಶಿವರಾಮ ಕೆ. ಭಂಡಾರಿ (ಶಿವಾ’ಸ್), ಎಲ್.ವಿ ಅವಿನ್, ಎನ್.ಎಂ ಸನೀಲ್ ಕಲೀನಾ, ಆನಂದ್ ಎ.ಅಂಚನ್ ಕಲಂಬೋಲಿ, ರಾಜಾ ವಿ.ಸಾಲ್ಯಾನ್, ನಿತ್ಯಾನಂದ ಡಿ. ಕೋಟ್ಯಾನ್, ನಾಗೇಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ (ಕಿನ್ಯಾ-ತಲಪಾಡಿ) ಡೊಂಬಿವಿಲಿ, ಕು| ವೈಷ್ಣವಿ ಡಿ.ಶೆಟ್ಟಿ, ಸಿಮಂತೂರು ಚಂದ್ರಹಾಸ ಸುವರ್ಣ, ಸಂಜೀವ ಡಿ.ಕಾಂಚನ್ ಮೂಳೂರು,ಸತೀಶ್ ಎನ್.ಬಂಗೇರಾ (ಅಕ್ಷಯ), ಅಶೋಕ್ ಎಸ್.ಕರ್ಕೇರಾ ಅಂಧೇರಿ ಸೇರಿದಂತೆ ಕನ್ನಡ ಸಂಘ ಸಾಂತಕ್ರೂಜ್, ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ, ಕೆ.ಡಿ ಶೆಟ್ಟಿ (ಭವಾನಿ ಫೌಂಡೇಶನ್, ಮುಂಬಯಿ) ಬಿಲ್ಲವರ ಅಸೋಸಿಯೇ ಶನ್ ಮುಂಬಯಿ, ನಾಗರಾಜ್ ಡಿ.ಪಡುಕೋಣೆ (ಎಲ್.ಜಿ ಫೌಂಡೇಶನ್, ಪೊವಾಯಿ) ಸಂಸ್ಥೆಗಳೂ ಸಹಾಯ ಹಸ್ತವನ್ನೀಡಿ ಸಹಕರಿಸಿದ್ದು, ಮೋಹನ್ ಬಳಂಜ ಪರಿವಾರವು ಸರ್ವರ ಅಭಾರಮನ್ನಿಸಿರುವರು.

Write A Comment